ಧ್ಯೇಯ ವಾಕ್ಯ
ವಿಜಯನಗರ ಜಿಲ್ಲೆಯು ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭೌಗೊಳಿಕವಾಗಿ ಸಂಪತ್ಭರಿತವಾಗಿದ್ದು, ಇಲ್ಲಿ ಸದಾಕಾಲ ಭೇಟಿ ನೀಡುವ ದೇಶಿ ಮತ್ತು ವಿದೇಶಿ ಪ್ರವಾಸಿಗರಿಂದ ಈ ಕ್ಷೇತ್ರದ ಕೀರ್ತಿಯು ಎಷ್ಟು ದೂರದವರೆಗೆ ಹರಡಿತ್ತು ಎಂಬುದನ್ನು ಎಲ್ಲರಿಗೂ ತಿಳಿಸುತ್ತದೆ.
ನಾವು ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧಗಳನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮೂಹ ಪೊಲೀಸ್ ವ್ಯವಸ್ಥೆ ಮೂಲಕ ಜಾಗೃತಿ ಮೂಡಿಸುವುದು ಮತ್ತು ಸಂವಿಧಾನಿಕವಾಗಿ ಅವರ ಹಕ್ಕುಗಳನ್ನು ಕಾಪಾಡುವುದು ನಮ್ಮ ಗುರಿಯಾಗಿದೆ.
- ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಣೆ ಮಾಡುವುದು
- ನಾಗರೀಕರ ಸ್ವಂತ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಕಾಪಾಡುವುದು
- ನಾಗರೀಕರ ಹಕ್ಕುಗಳನ್ನು ಎತ್ತಿಹಿಡಿಯುವುದು
- ಅಪರಾಧಗಳನ್ನು ಪತ್ತೆ ಹಚ್ಚಲು ವೈಜ್ಞಾನಿಕ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು
- ಸಾಮಾಜಿಕ ವಿರೋಧಿ ಅಂಶಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವುದು
ಸಾರ್ವಜನಿಕ ಸೇವೆಗಳು
ಇ.ಆರ್.ಎಸ್.ಎಸ್ – 112
ಇದು ಭಾರತ ಸರ್ಕಾರದ ‘ಒಂದೇ ಭಾರತ’ ಯೋಜನೆಯಡಿಯಲ್ಲಿ ರೂಪಿಸಲಾದ ಸೇವೆಯಾಗಿದ್ದು, ಒಂದು ದೇಶ – ಒಂದು ತುರ್ತು ಸಂಖ್ಯೆ ಎಂಬ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಮನೆಬಾಗಿಲಿಗೆ ಪೊಲೀಸ್ ಸೇವೆಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಕಾನೂನು ಸುವ್ಯವಸ್ಥೆ, ಅಪರಾಧ, ಅಗ್ನಿ ದುರಂತ ಮುಂತಾದ ಸೇವೆಗಳಿಗಾಗಿ ಸಾರ್ವಜನಿಕರು ಫೋನ್ ಕರೆ, ಎಸ್.ಎಂ.ಎಸ್ ಅಥವಾ ಇ-ಮೇಲ್ ಮೂಲಕ ಸಂಪರ್ಕ ಸಾಧಿಸಬಹುದು.
- ಕರೆ ಅಥವಾ ಎಸ್.ಎಂ.ಎಸ್ ಮಾಡಲು : 112 ಡಯಲ್ ಮಾಡಿ
- ಇ-ಮೇಲ್ ಮೂಲಕ : erss112[at]gmail[dot]com
- ಮೊಬೈಲ್‌ನಲ್ಲಿ ERSS112 ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು
ನಿರ್ಭಯ ಪಡೆ
ಪ್ರತಿ ಪೊಲೀಸ್ ಠಾಣೆಯಲ್ಲಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಇವರು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರಿಗೆ ಸೂಕ್ತ ರಕ್ಷಣೆ ನೀಡುವುದು ಇವರ ಆದ್ಯ ಕರ್ತವ್ಯವಾಗಿದೆ.
ದುರ್ಗ ಪಡೆ
ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ಪಡೆ ರೂಪಿಸಲಾಗಿದ್ದು, ಇದನ್ನು ‘ಪಿಂಕ್ ಪೊಲೀಸ್’ ಅಥವಾ ‘ದುರ್ಗ ಪಡೆ’ ಎಂದು ಕರೆಯಲಾಗುತ್ತದೆ. ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಪಡೆಯನ್ನು ಸ್ಥಾಪಿಸಲಾಗಿದೆ.
ಸಕಾಲ ಸೇವೆಗಳು
ಸೇವೆಗಳನ್ನು ನೀಡುವ ಅವಧಿ :
- ಪಾಸ್‌ಪೋರ್ಟ್ ಸೇವೆಗಳು – 21 ದಿನಗಳು
- ಉದ್ಯೋಗಕ್ಕಾಗಿ ಗುಣ/ನಡತೆ ಪ್ರಮಾಣಪತ್ರಗಳು – 21 ದಿನಗಳು
- ಬಂದೂಕು ಪರವಾನಿಗೆ – 21 ದಿನಗಳು
ಮಕ್ಕಳ ಸಹಾಯವಾಣಿ – 1098
ಮಕ್ಕಳ ಸಹಾಯಕ್ಕಾಗಿ ಈ ಸಹಾಯವಾಣಿಯನ್ನು ಕೇಂದ್ರಿಕೃತವಾಗಿ ರೂಪಿಸಲಾಗಿದ್ದು, ಯಾವುದೇ ಪ್ರದೇಶದಿಂದ ಮಕ್ಕಳು ಅಥವಾ ವಯಸ್ಕರು ಕರೆ ಮಾಡಿ ಸಹಾಯ ಪಡೆಯಬಹುದು. ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಈ ಸಹಾಯವಾಣಿಯ ಮುಖ್ಯ ಉದ್ದೇಶವಾಗಿದೆ.
ಈ ಸಹಾಯವಾಣಿ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ:
- 1098 ಗೆ ಕರೆ ಮಾಡಿ : ಈ ಸಹಾಯವಾಣಿ ದಿನ ಮತ್ತು ರಾತ್ರಿ ಕಾರ್ಯನಿರ್ವಹಿಸುತ್ತದೆ.
- ಕರೆ ಸ್ವೀಕೃತಿ ನಂತರ : ಸ್ಥಳದ ಮಾಹಿತಿ ಪಡೆದು, ಅಗತ್ಯವಿದ್ದಲ್ಲಿ ಸಹಾಯಕರನ್ನು ಕಳುಹಿಸಲಾಗುತ್ತದೆ.
- 60 ನಿಮಿಷಗಳಲ್ಲಿ ಸಹಾಯ : ಮಾಹಿತಿ ಪಡೆದ ನಂತರ, ಕೇವಲ 60 ನಿಮಿಷಗಳಲ್ಲಿ ಮಕ್ಕಳಿಗೆ ನೆರವು ಒದಗಿಸಲಾಗುತ್ತದೆ.
ಮಹಿಳಾ ಸಹಾಯವಾಣಿ – 1090
ಮಹಿಳೆಯರು ಅನೇಕ ಸಾಮಾಜಿಕ ಹಾಗೂ ಕೌಟುಂಬಿಕ ಶೋಷಣೆಗಳಿಗೆ ಒಳಗಾಗುತ್ತಿದ್ದು, ಹಲವಾರು ಸಂದರ್ಭಗಳಲ್ಲಿ ಅವುಗಳನ್ನು ಬಹಿರಂಗಪಡಿಸದೆ ಇರುವುದರಿಂದ ಅವರ ಸುರಕ್ಷತೆಗೆ ಧಕ್ಕೆಯಾಗುತ್ತದೆ. ಇದರ ಪರಿಣಾಮವಾಗಿ ಅವರ ಮಾನಸಿಕ ಸ್ಥೈರ್ಯ ಕುಸಿಯುವ ಸಾಧ್ಯತೆ ಇದೆ.
ಆದ್ದರಿಂದ ಜಿಲ್ಲಾ ಪೊಲೀಸ್ ವತಿಯಿಂದ ಇಂತಹ ಶೋಷಣೆಗೆ ಒಳಗಾದ ಮಹಿಳೆಯರ ರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ‘ನಿರ್ಭಯ ಪಡೆ’ ಹಾಗೂ ‘ದುರ್ಗ ಪಡೆ’ಗಳನ್ನು ರಚಿಸಲಾಗಿದೆ.
ಹಿರಿಯ ನಾಗರಿಕರ ಸೇವೆಗಳು
‘ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಹಾಗೂ ಕಲ್ಯಾಣ ಅಧಿನಿಯಮ 2007’ ರ ಪ್ರಕಾರ, ಹಿರಿಯ ನಾಗರಿಕರಿಗೆ ಅಗತ್ಯ ಪೊಲೀಸ್ ಸಹಾಯವನ್ನು ಒದಗಿಸಲಾಗುತ್ತದೆ.
ಸೂಕ್ತ ಸಂದಾಯ, ಸಮಾಲೋಚನೆ, ಅರ್ಜಿಗಳ ಶೀಘ್ರ ವಿಲೇವಾರಿ ಹಾಗೂ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.