ರಾಣಿ ಸ್ನಾನ ಗೃಹ ಹಂಪಿ
ನಿರ್ದೇಶನಕಮಲಾಪುರವನ್ನುದಾಟಿರಾಜಪ್ರಾಂಗಣದೆಡೆಗೆ ತೆರಳುವ ಮಾರ್ಗದ ಬಲಭಾಗದಲ್ಲಿರುವ ವಿಸ್ತಾರವಾದಕಟ್ಟಡವೇರಾಣಿಯರ ಸ್ನಾನಗೃಹ. ಕಲ್ಲು, ಇಟ್ಟಿಗೆ, ಗಾರೆಗಚ್ಚಿನಲ್ಲಿ ನಿರ್ಮಿಸಿರುವ ಚಚ್ಚೌಕಾಕಾರದಕಟ್ಟಡವಿದು. ಇದು ಹೊರಭಾಗದಲ್ಲಿ ಸರಳವಾದ ಸಾಮಾನ್ಯಕಟ್ಟಡವೆಂಬAತೆಕAಡುಬAದರೂ, ಒಳಭಾಗದಲ್ಲಿ ಇಂಡೋ-ಸಾರ್ಸೆನಿಕ್ಶೈಲಿಯ ಕಮಾನುಗಳನ್ನು ಒಳಗೊಂಡ 24 ಗುಮ್ಮಟಗಳು ವೈವಿಧ್ಯಮಯ ವಿನ್ಯಾಸ ಮತ್ತು ಅಲಂಕರಣೆಗಳಿAದ ಕೂಡಿವೆ.ಕಟ್ಟಡದ ಸುತ್ತಲೂ ನೀರು ನಿಲ್ಲುವಂತೆ ವ್ಯವಸ್ಥೆ ಕಲ್ಪಿಸಿರುವುದು ಇದರ ವಿಶೇಷತೆಯೇಆಗಿದೆ. ಕಮಲಾಪುರಕೆರೆಯಿಂದ ಕಾಲುವೆಗಳ ಮೂಲಕ ಹರಿದು ಬರುತ್ತಿದ್ದ ನೀರನ್ನು ಪೂರ್ವದಿಕ್ಕಿನಿಂದ ಸಣ್ಣಕಲ್ಲಿನಕಿರುಗಾಲುವೆಯಿಂದಇದಕ್ಕೆಹರಿಸಲಾಗುತ್ತಿತ್ತು. ಈ ಕಟ್ಟಡದ ಮಧ್ಯದಲ್ಲಿರುವಚಚ್ಚೌಕಾಕಾರದತೊಟ್ಟಿಯ ಸುತ್ತಲೂ ನಡೆದಾಡಲು ಅನುವಾಗುವ ಪ್ರಾಂಗಣವಿದೆ. ಈ ಪ್ರಾಂಗಣದ ಸುತ್ತಲೂಕಮಾನು ಮತ್ತು ಗುಮ್ಮಟಗಳಿಂದ ಕೂಡಿದಛಾವಣಿಯಿದೆ. ಈ ಗುಮ್ಮಟಗಳುಒಂದಕ್ಕಿAತಇನ್ನೊAದು ವಿಭಿನ್ನವಾಗಿಅಲಂಕರಣೆಯನ್ನು ಹೊಂದಿವೆ.ಇದರಮಧ್ಯದಲ್ಲಿರುವ ಸ್ನಾನಕೊಳವು 1.8 ಮೀಟರ್ ಆಳವಿದೆ. ಹಾಗೆಯೇ ಸ್ನಾನಕೊಳದಲ್ಲಿ ಮಂಟಪವಿದ್ದುದು ಕುಳಿಗಳಿಂದ ದೃಢವಾಗುವುದು. ಪೂರ್ವ, ಪಶ್ಚಿಮ, ಉತ್ತರ ಗೋಡೆಗಳ ಮಧ್ಯಭಾಗದಲ್ಲಿದೊಡ್ಡದಾದತೆರೆದ ಕಮಾನುಗಳು ಮತ್ತು ಸುತ್ತಲೂ ಸುಂದರವಾಗಿಅಲAಕರಣ ಮಾಡಿದ ಮೊಗಸಾಲೆಗಳಿವೆ. ಅಂಕಣದ ಹೊರಗೋಡೆಗಳಲ್ಲಿ ಸಣ್ಣ ಕಮಾನುಗಳುಳ್ಳ ಕಿಟಕಿಗಳಿವೆ.ಈಜುಕೊಳಕ್ಕೆ ಮುಖಮಾಡಿದಂತೆ ಮುಂಚಾಚಿದ ಕಿಟಕಿಗಳಿರುವ ಕೋಷ್ಠಕಗಳು, ಅವುಗಳಲ್ಲಿ ಕುಳಿತುಕೊಳ್ಳಲು ಅನುವಾಗುವಂತೆ ಆಸನಗಳನ್ನು ಕಲ್ಪಿಸಿರುವುದು ಗಮನಾರ್ಹ. ದಕ್ಷಿಣದಅಟ್ಟಣಿಗೆಯ ಪಕ್ಕದಲ್ಲಿಚಿಕ್ಕಚಿಕ್ಕ ಕಮಾನುಗಳುಳ್ಳ ಪ್ರವೇಶದ್ವಾರವಿದೆ. ಈ ಪ್ರವೇಶದ್ವಾರದ ಹತ್ತಿರಉಪ್ಪರಿಗೆಯನ್ನುಏರಿಹೋಗಲುಅಗತ್ಯವಾದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಇಲ್ಲಿರುವಕಮಾನು ಮತ್ತು ಗುಮ್ಮಟಗಳುಳ್ಳ bsÁವಣಿಗಳು ವಿಭಿನ್ನ ಮಾದರಿಯವಾಗಿವೆ. ಅಷ್ಟಕೋನ, ವೃತ್ತಾಕಾರದಲ್ಲಿರುವ ಗುಮ್ಮಟಗಳಿಗೆ ಅರೆಗಂಬ, ಪುಷ್ಪಾಕೃತಿಯ ಫಲಕ, ಹಂಸ-ಗಿಳಿಗಳ ಸಾಲು, ಯಾಳಿ, ಸರಪಳಿಯ ರಚನೆ, ಕಮಲ, ಹೂವಿನ ಬಳ್ಳಿ, ಮೊಗ್ಗು, ದಳ ಮೊದಲಾದವುಗಳಿಂದ ಅಲಂಕರಿಸಿದ್ದಾರೆ. ಈ ಅಲಂಕರಣೆಗಳು ಗುಮ್ಮಟದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಈ ಕಟ್ಟಡವನ್ನುಗಾರೆಗಚ್ಚು ಬಳಸಿ ನಿರ್ಮಿಸಲಾಗಿದ್ದು, ಇದುರಾಜಪರಿವಾರದವರ ಬಹುಮುಖ್ಯ ಸ್ನಾನದ ಕೊಳವಾಗಿದ್ದಿತು. ಇದಕ್ಕೆಕಮಲಾಪುರದಕೆರೆಯಿಂದ ಶುದ್ಧ ನೀರನ್ನು ಹಾಯಿಸುವ ವ್ಯವಸ್ಥೆಇರುವಂತೆಯೇ, ಮಲಿನವಾದ ನೀರು ಹೊರಹೋಗಲು ಸಣ್ಣ ಕೊಳವೆಗಳನ್ನೂ ಅಳವಡಿಸಿರುವುದು ವಿಶೇಷ.
ಹೊಸಪೇಟೆತಾಲ್ಲೂಕಿಗೆೆ 12 ಕಿ.ಮೀ ಇರುತ್ತದೆ.
ಹತ್ತಿರವಿರುವ ಪ್ರವಾಸಿ ತಾಣಗಳು
• ತುಂಗಾಭದ್ರಾಜಲಾಶಯ, ಹೊಸಪೇಟೆತಾಲ್ಲೂಕು
• ದರೋಜಿಕರಡಿಧಾಮ, ಕಮಲಾಪುರ
• ಅಟಲ್ ಬಿಹಾರಿ ವಾಜಪೇಯಿಜೂಯಾಲಿಜಿಕಲ್ ಪಾರ್ಕ್, ಕಮಲಾಪುರ
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ.
ರೈಲಿನಿಂದ
ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ.
ರಸ್ತೆ ಮೂಲಕ
ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.