Close

ವಿಜಯನಗರ ಜಿಲ್ಲೆ ಪೊಲೀಸ್

ಧ್ಯೇಯ ವಾಕ್ಯ

ವಿಜಯನಗರ ಜಿಲ್ಲೆಯು ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭೌಗೊಳಿಕವಾಗಿ ಸಂಪತ್ಭರಿತವಾಗಿದ್ದು, ಇಲ್ಲಿ ಸದಾಕಾಲ ಭೇಟಿ ನೀಡುವ ದೇಶಿ ಮತ್ತು ವಿದೇಶಿಯ ಪ್ರವಾಸಿಗರಿಂದ ಈ ಕೇತ್ರದ ಕೀರ್ತಿಯು ಎಷ್ಟು ದೂರದ ವರೆಗೆ ಹರಡಿತ್ತು ಎಂಬುದನ್ನು ಎಲ್ಲರಿಗೂ ತಿಳಿಸುತ್ತದೆ.

ನಾವು ಸಾರ್ವಜಿನಿಕರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧಗಳನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮೂಹ ಪೊಲೀಸ್ ವ್ಯವಸ್ಥೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಂವಿಧಾನಿಕವಾಗಿ ಅವರ ಹಕ್ಕುಗಳನ್ನು ಕಾಪಾಡುವುದು ನಮ್ಮ ಗುರಿಯಾಗಿದೆ
• ಜಿಲ್ಲೆಯಲ್ಲಿ ಶಾಂತಿ ಸುವ್ಯಸ್ಥೆಯನ್ನು ಕಾಪಾಡುವುದು ಮತ್ತು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಣೆ ಮಾಡುವುದು
• ನಾಗರೀಕರ ಸ್ವಂತ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಕಾಪಾಡುವುದು
• ನಾಗರೀಕರ ಹಕ್ಕುಗಳನ್ನು ಎತ್ತಿಹಿಡಿಯುವುದು
• ಅಪರಾಧಗಳನ್ನು ಪತ್ತೆ ಹಚ್ಚಲು ವ್ಯಜ್ಞಾನಿಕವಾಗಿ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಿಸಿಕೊಳ್ಳುವುದು
• ಸಾಮಾಜಿಕ ವಿರೋಧಿ ಅಂಶಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವುದು

ಸಾರ್ವಜನಿಕ ಸೇವೆಗಳು

ಇ.ಆರ್‌.ಎಸ್.ಎಸ್- 112
ಇದು ಭಾರತ ಸರ್ಕಾರದ ʼಒಂದೇ ಭಾರತʼ ಅಡಿಯಲ್ಲಿ ರೂಪಿಸಲಾದ ಯೋಜನೆಯಾಗಿದ್ದು, ಒಂದು ದೇಶ ಒಂದು ತುರ್ತು ಸಂಖ್ಯೆ ಇರುವ ನಿಟ್ಟಿನಲ್ಲಿ, ಈ ಯೋಜನೆ ತುರ್ತು ಸಮಯದಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ಪೊಲೀಸ್‌ ಸೇವೆಯನ್ನು ಒದಗಿಸುವುದಾಗಿದೆ. ಇದರಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ, ಅಗ್ನಿ ದುರಂತ ಮುಂತಾದ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಫೋನ್‌ ಕರೆ , ಎಸ್.ಎಂ.ಎಸ್‌ ಅಥವಾ ಇ-ಮೇಲ್‌ ಮೂಲಕ ಸಂಪರ್ಕ ಸಾಧಿಸಿಬಹುದಾಗಿದೆ.
ಕರೆ ಅಥವಾ ಎಸ್. ಎಂ.ಎಸ್‌ ಮಾಡಲು :- 112 ಡಯಲ್‌ ಮಾಡಿ
ಇ-ಮೇಲ್‌ ಮೂಲಕ :- erss112@gmail.com
ಇದರ ಹೊರತಾಗಿ ಸಾರ್ವಜನಿಕರು ಮೊಬೈಲ್‌ನಲ್ಲಿ ERSS112 ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು

ನಿರ್ಭಯ ಪಡೆ

ಪ್ರತಿ ಪೊಲೀಸ್‌ ಠಾಣೆಯಲ್ಲಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಇವರು ಮಹಿಳೆಯರ ಮೇಲೆ ನಡೆಯು ದೌರ್ಜನ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ, ಅವರಿಗೆ ಸೂಕ್ತ ರಕ್ಷಣೆ ನೀಡುವುದು ಇವರ ಆದ್ಯ ಕರ್ತವ್ಯವಾಗಿದೆ.

ದುರ್ಗ ಪಡೆ

ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯರಿಗೆ ವಿಶೇಷ ಪಡೆ ರೂಪಿಸಲಾಗಿದ್ದು, ಇವರಿಗೆ ಪಿಂಕ್‌ ಪೊಲೀಸ್‌ ಅಥವಾ ದುರ್ಗ ಪಡೆ ಎಂದು ಕರೆಯಲಾಗಿದೆ. ಇವರು ಮಹಿಳೆಯರ ಸುರಕ್ಷತೆ , ಸಾಮಾಜಿಕ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಸಕಾಲ ಸೇವೆಗಳು

ತೆಗೆದುಕೊಳ್ಳುವ ಅವಧಿ
• ಪಾಸ್‌ಪೊರ್ಟ್ ಸೇವೆಗಳು – 21 ದಿನಗಳು
• ಉದ್ಯೋಗಕ್ಕಾಗಿ ಗುಣ/ನಡತೆ ಪ್ರಮಾಣಪತ್ರಗಳು – 21 ದಿನಗಳು
• ಬಂದೂಕು ಪರವಾನಿಗೆ – 21 ದಿನಗಳು

ಮಕ್ಕಳ ಸಹಾಯವಾಣಿ-1098

ಮಕ್ಕಳ ಸಹಾಯಕ್ಕಾಗಿ ಸಲುವಾಗಿ ಈ ಸಹಾಯವಾಣಿಯನ್ನು ಕೇಂದ್ರಿಕೃತವಾಗಿ ಮಾಡಿದ್ದು, ಇದರಲ್ಲಿ ಯಾವುದೇ ಪ್ರದೇಶದಲ್ಲಿ ಮಕ್ಕಳು ಅಥವಾ ವಯಸ್ಕರು ಕರೆ ಮಾಡಿ ಸಹಾಯ ಪಡೆಯಬಹುದು. ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಈ ಸಹಾಯವಾಣಿಯ ಮೂಲ ಉದ್ದೇಶವಾಗಿದ್ದು, ಈ ಸಹಾಯವಾಣಿ 03 ಹಂತಗಳಲ್ಲಿ ಕಾರ್ಯಚರಣೆ ಮಾಡುತ್ತದೆ.
1098 ಗೆ ಕರೆ ಮಾಡಿ:- ಈ ಸಹಾಯವಾಣಿಗೆ ಕರೆ ಮಾಡಿ , ಇದು ದಿನ ಮತ್ತು ರಾತ್ರಿ ಕಾರ್ಯನಿರ್ವಹಿಸುತ್ತದೆ.
ಕರೆ ಸ್ವೀಕೃತಿ ನಂತರ:- ಸಹಾಯವಾಣಿಯವರು ಕರೆಯನ್ನು ಸ್ವೀಕಾರ ಮಾಡಿದ ತರುವಾಯ, ಸ್ಥಳದ ಬಗ್ಗೆ ಮಾಹಿತಿ ಪಡೆದು, ಅಗತ್ಯಬಿದ್ದರೆ ಸಹಾಯಕರನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು
60 ನಿಮಿಷದಲ್ಲಿ ಸಹಾಯ:- ಒಂದು ಸಲ ಮಕ್ಕಳ ಮಾಹಿತಿ ಪಡೆದ ನಂತರ , ಕೇವಲ 60 ನಿಮಿಷಗಳಲ್ಲಿ ಸದರಿ ಮಕ್ಕಳನ್ನು ಕಾಪಾಡಲಾಗುವುದು

ಮಹಿಳಾ ಸಹಾಯವಾಣಿ:-1090

ಮಹಿಳೆಯರು ಯುಗಯುಗಳಿಂದ ಶೋಷಣೆಗೆ ಒಳಪಡುತ್ತಾ ಬಂದಿದ್ದು, ಅವರ ಬದುಕಿನಲ್ಲಿ ಅನೇಕ ಶೋಷಣೆಗಳಿಗೆ ಒಳಪಡುತ್ತಿರುತ್ತಾರೆ. ಅದರೆ ಸಾಮಾಜಿಕ ಮತ್ತು ಕೌಟುಂಬಿಕ ಕಾರಣಗಳಿಂದ ಅವರು ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಗಳನ್ನು ಬಹಿರಂಗಪಡಿಸದೆ ಇರುವುದು ಅವರ ಸುರಕ್ಷತೆಗೆ ಕಂಠಕವಾಗಿರುತ್ತದೆ. ಅವರ ಮಾನಸಿಕ ಸ್ಥೈರ್ಯ ಕುಸಿಯುತ್ತಾ ಬರುತ್ತದೆ. ಅದ್ದರಿಂದ ನಮ್ಮ ಜಿಲ್ಲಾ ಪೊಲೀಸ್‌ ವತಿಯಿಂದ ಇಂತಹ ಶೋಷಣೆಗೊಳಪಟ್ಟ ಮಹಿಳೆಯರನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಇದಕ್ಕಾಗಿ ಅವರಿಗೆ ವಿಶೇಷ ಪಡೆಗಳಾದ ʼನಿರ್ಭಯ ಪಡೆʼ, ʼದುರ್ಗ ಪಡೆʼ ಗಳನ್ನು ಸೃಜಿಸಲಾಗಿರುತ್ತದೆ.

ಹಿರಿಯ ನಾಗರಿಕರ ಸೇವೆಗಳು

ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007 ರ ಪ್ರಕಾರ, ಹಿರಿಯ ನಾಗರಿಕರಿಗೆ ಬೇಕಾದ ಅಗತ್ಯ ಪೊಲೀಸ್ ಸಹಾಯ ಹಸ್ತವನ್ನು ನೀಡಲಾಗುವುದು. ಸೂಕ್ತ ಸಂದಾಯ & ಸಮಾಲೋಚನೆ ಮತ್ತು ಅಂತಹ ಅರ್ಜಿಗಳ ಶೀಘ್ರ ವಿಲೇವಾರಿ ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.