ಮರುಳಸಿದ್ದೇಶ್ವರ ದೇವಸ್ಥಾನ-ಉಜ್ಜಿನಿ, ಕೊಟ್ಟೂರು ತಾಲೂಕು
ಉಜ್ಜಿನಿಯು ಪ್ರಸಿದ್ಧಿಗೊಂಡಿರುವುದುಅಲ್ಲಿನ ಪ್ರಾಚೀನ ಮರುಳಸಿದ್ಧೇಶ್ವರ ದೇವಾಲಯದಿಂದ. ಹಾಗೆಯೇ ಪಂಚಪೀಠಗಳಲ್ಲಿ ಒಂದಾದ ಸದ್ಧರ್ಮ ಸಿಂಹಾಸನ ಪೀಠ(ಮರುಳಸಿದ್ಧ ಮo)Àದಿಂದಲೂ ಹೆಸರಾಗಿದೆ. ಈ ಮಠವುಉಜ್ಜಿನಿ ಮಠವೆಂದೇ ಹೆಸರಾಗಿದೆ. ಇಲ್ಲಿನ ಮರುಳಸಿದ್ದೇಶ್ವರ ದೇವಾಲಯವು ಕಲೆ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ದೇವಾಲಯದ ಒಳಭಾಗವು ಸುಂದರ ಹಾಗೂ ಸೂಕ್ಚö್ಮ ಕೆತ್ತನೆಗಳಿಂದ ಕೂಡಿದ್ದು, ಇಲ್ಲಿನ ಭುವನೇಶ್ವರಿಯಲ್ಲಿಕೆತ್ತಲಾದ ಸುಂದರ ಹಾಗೂ ಸೂಕ್ಷö್ಮ ಕಲೆ ಮತ್ತು ವಾಸ್ತುಶಿಲ್ಪದ ಸೌಂದರ್ಯವನ್ನುಕAಡಜನರು ನಾಣ್ಣುಡಿಯಲ್ಲಿ “ಹಂಪಿಯನ್ನು ಒಳಗೆ ನೋಡು, ಉಜ್ಜಿನಿಯನ್ನು ಒಳಗೆ ನೋಡು’’ ಎಂದೇ ಬಣ್ಣಿಸಿದ್ದಾರೆ.
ಕಲ್ಯಾಣಚಾಲುಕ್ಯಅವಧಿಯಲ್ಲಿ ನಿರ್ಮಾಣವಾದ ಈ ದೇವಾಲಯವುದೇವಗಿರಿಯಾದವರು, ವಿಜಯನಗರಅರಸರು ಮತ್ತು ಪಾಳೆಯಗಾರರ ಆಳ್ವಿಕೆಯಲ್ಲಿ ದಾನದತ್ತಿಗಳನ್ನು ಪಡೆದು ವಿವಿಧ ಭಾಗಗಳಿಂದ ವಿಸ್ತಾಗೊಂಡಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯವು ಮುಖ್ಯUರ್ಭಗೃಹ, ಅಂತರಾಳ, ಸಭಾಮಂಟಪ, ಮಹಾಮಂಟಪ,, ಮಹಾದ್ವಾರ ಗೋಪುರಗಳಲ್ಲದೆ ಇತ್ತೀಚೆಗೆ ನಿರ್ಮಾಣವಾದ ಮಂಟಪಗಳು ಅನ್ನಸಂತರ್ಪಣಾ ಮಂದಿರ ಮತ್ತು ಮಠವನ್ನೂ ಒಳಗೊಂಡಿದೆ. ಮುಖ್ಯಗರ್ಭಗೃಹದಲ್ಲಿ ಕಪ್ಪುಶಿಲೆಯ ಶಿವಲಿಂಗವಿದ್ದು, ಗರ್ಭಗೃಹದ ಬಾಗಿಲುವಾಡವನ್ನು ಹೂಬಳ್ಳಿ, ಸುರುಳಿ, ಅರೆಗಂಬ ಮತ್ತು ಸಿಂಹ ಶಾಖೆಗಳಿಂದ ಅಲಂಕರಿಸಿದ್ದು, ಲಲಾಟದಲ್ಲಿಗಜಲಕ್ಷಿö್ಮಯನ್ನುಕಡೆದಿರುವರು. ಅಂತರಾಳದ ಭುವನೇಶ್ವರಿಯುಅತ್ಯಂತ ಸೂಕ್ಷö್ಮ ಕೆತ್ತನೆಗಳನ್ನು ಹೊಂದಿದ ಭಾಗವಾಗಿದೆ. ಇದನ್ನು ನೋಡಿಯೇಉಜ್ಜಿನಿಯನ್ನು ಒಳಗೆ ನೋಡುಎಂದಿರುವುದು. ತಿರುಗಣೆಯಂತ್ರದಿAದ ಮಾಡಲಾದ ಹತ್ತು ಕಂಬಗಳುಳ್ಳ ಸಭಾಮಂಟಪದ ಇಕ್ಕೆಲಗಳಲ್ಲಿ ನಾಲ್ಕು ಚಿಕ್ಕ ಗರ್ಭಗೃಹಗಳಿವೆ. ಇವುಗಳಲ್ಲಿ ವೀರಭದ್ರ, ವೇಣುಗೋಪಾಲ ಹಾಗೆಯೇ ಶೈವ ಶಿಲ್ಪಗಳನ್ನು ಪ್ರತಿಷ್ಟಾಪಿಸಲಾಗಿದೆ. ಇವುಗಳಲ್ಲದೆ ಇಲ್ಲಿನ ಕೂಡುಗಳಲ್ಲಿ ಗಣೇಶ, ವಿಶ್ವಾರಾಧ್ಯ, ಮಳೆಸ್ವಾಮಿ, ಮರುಳಾರಾಧ್ಯ, ಸಿದ್ಧರಾಮ, ಏಕೋರಾಮ, ಜಕಣಾಚಾರಿ, ಭಕ್ತಭೂಷಣ, ಪಾಪವಿಮೋಚನ ಎಂದುಕರೆಯುವ ಶಿಲ್ಪಗಳನ್ನು ಸ್ಥಾಪಿಸಿದ್ದಾರೆ. ಗರ್ಭಗೃಹದ ಮೇಲ್ಭಾಗದಲ್ಲಿ ನಾಲ್ಕು ತಲಗಳುಳ್ಳ ವೇಸರ ಶೈಲಿಯ ಶಿಖರವಿದ್ದು, ಪ್ರತಿವರ್ಷ ನಡೆಯುವತೈಲಾಭಿಷೇಕದ ಹಿನ್ನೆಲೆಯಲ್ಲಿ ಶಿಖರದ ಅಲಂಕರಣೆಗಳು ಕಾಣಬುರುತ್ತಿಲ.್ಲ ದೇವಾಲಯದ ಮುಂಭಾಗದಲ್ಲಿ ಬೃಹತ್ ನಂದಿಯನ್ನೂ ಸ್ಥಾಪಿಸಿರುವರು. ಈ ದೇವಾಲಯದಜಾತ್ರೆ ಮತ್ತು ಉತ್ಸವಾಚರಣೆಗಳು ವೈಶಾಖ ಮಾಸದಲ್ಲಿ ವಿಶೇಷವಾಗಿ ಜರುಗುತ್ತವೆ. ಅವುಗಳಲ್ಲಿ ರಥೋತ್ಸವ ಮತ್ತುತೈಲಾಭಿಷೇಕೋತ್ಸವವು ಪ್ರಸಿದ್ಧಿ ಪಡೆದಿವೆ..
ಈ ದೇಗುಲದಲ್ಲಿ ಏಳಕ್ಕೂ ಹೆಚ್ಚು ಶಾಸನಗಳಿವೆ. ಇವುಗಳಲ್ಲಿ ಕ್ರಿ.ಶ. ೧೨ನೆಯ ಶತಮಾನದ ಜಗದಳ ಪಾಂಡ್ಯನ ಶಾಸನವು ಉಜ್ಜಿನಿಯಕಲಿದೇವರಿಗೆ ಕೋಗಳಿ-೪೦೦ರ ಭೂಮಿಯನ್ನುದಾನ ನೀಡಿದ ವಿವರವಿದೆ. ನವರಂಗದಕAಬದಲ್ಲಿರುವಯಾದವ ಮಹಾದೇವನಕಾಲದ ಶಾಸನವು ಮಲ್ಲಿನಾಥದೇವರ ನಂದಾದೀವಿಗೆಗೆದತ್ತಿಬಿಟ್ಟ ವಿವರವಿದೆ. ಕ್ರಿ.ಶ. ೧೨೬೮ರ ಇನ್ನೊಂದು ಶಾಸನದಲ್ಲಿ ಭೋಗಯ್ಯ ಎಂಬುವವನು ಉಜ್ಜಿನಿಯ ಮಲ್ಲಿಕಾರ್ಜುನದೇವರಿಗೆ ಸುಂಕವನ್ನು ಮಾನ್ಯವಾಗಿ ಬಿಟ್ಟಉಲ್ಲೇಖವಿದೆ. ಕ್ರಿ.ಶ. ೧೫೨೯ರಲ್ಲಿ ವಿಜಯನಗರಅರಸಅಚ್ಯುತರಾಯನೂ ಈ ದೇವರಿಗೆದಾನವನ್ನು ನೀಡಿದ್ದನು. ಈ ದೇವಾಲಯದಗಂಟೆಯ ಮೇಲಿನ ಕ್ರಿ.ಶ. ೧೭೨೬ರ ಶಾಸನವು ಮುಮ್ಮಡಿ ಬಸವಪ್ಪನಾಯಕನು ಸಿದ್ಧೇಶ್ವರ ದೇವರಿಗೆಗಂಟೆಯನ್ನು ಮಾಡಿಸಿಕೊಟ್ಟುದಾಗಿ ಹೇಳಿದೆ. ಇಲ್ಲಿನಎಲ್ಲ ಶಾಸನಗಳನ್ನು ಗಮನಿಸಿದರೆ ಕ್ರಿ.ಶ. ೧೨ನೆಯ ಶತಮಾನದಲ್ಲಿಕಲಿದೇವರದೆಂದು ಕರೆಸಿಕೊಂಡ ಈ ದೇವಾಲಯಕ್ರಿ.ಶ. ೧೨೬೮ರಲ್ಲಿ ಮಲ್ಲಿಕಾರ್ಜುನನೆಂದೂ, ಕ್ರಿ.ಶ. ೧೭೨೬ರ ಹೊತ್ತಿಗೆ ಸಿದ್ಧೇಶ್ವರನೆಂದು ಪರಿವರ್ತನೆಯಾದದ್ದು ಸ್ಪಷ್ಟವಾಗುತ್ತದೆ.
ಉಜ್ಜಿನಿಯಿಂದಕೊಟ್ಟೂರುತಾಲ್ಲೂಕಿಗೆೆ೧೧ ಕಿ.ಮೀ ಇರುತ್ತದೆ.
ಹತ್ತಿರವಿರುವ ಪ್ರವಾಸಿ ತಾಣಗಳು
• ಕೋಟ್ಟೂರುತಾಲ್ಲೂಕಿನ ಬಸವೇಶ್ವರದೇವಾಲಯ
• ಜರಿಮಲೆ ಮತ್ತುಗುಡೇಕೋಟೆ, ಕೂಡ್ಲಿಗಿತಾಲ್ಲೂಕು
• ಮೈಲಾರದ ಮೈಲಾರಲಿಂಗೇಶ್ವರ&ಕುರುವತ್ತಿಯ ಮಲ್ಲಿಕಾರ್ಜುನದೇವಾಲಯ, ಹೂವಿನಹಡಗಲಿ ತಾಲ್ಲೂಕು.
• ಹಂಪಿ &ತುಂಗಾಭದ್ರಾ ಜಲಾಶಯಗಳು, ಹೊಸಪೇಟೆತಾಲ್ಲೂಕು
• ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಮತ್ತು ಉಚ್ಚಂಗಿ ದುರ್ಗಾದೇವಾಲಯ
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ
ರೈಲಿನಿಂದ
ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ
ರಸ್ತೆ ಮೂಲಕ
ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.