ಪುರಂದರ ಮಂಟಪ, ಹಂಪಿ
ವಿಠಲ ದೇವಾಲಯದ ಪಶ್ಚಿಮಕ್ಕೆ ತುಂಗಭದ್ರಾ ನದಿಯ ಬಲದಂಡೆಯಲ್ಲಿ ಕಣಶಿಲೆಯ ಕಂಬಗಳಿAದ ನಿರ್ಮಿಸಲಾದತೆರೆದವಿಸ್ತಾರಮಂಟಪವಿದು. ಹದಿನಾರನೇ ಶತಮಾನದಲ್ಲಿ ನಿರ್ಮಾಣವಾದ ಈ ಮಂಟಪವನ್ನುಇAದು ಪುರಂದರ ಮಂಟಪವೆAದೇಕರೆಯಲಾಗುತ್ತದೆ. ಇದನ್ನು ವಿಠಲನ ಪರಮಭಕ್ತನಾದ ಪುರಂದರದಾಸರ(1484-1564) ಹೆಸರಿನಿಂದಕರೆಯುತ್ತಿರುವರು.
ಪುರAದರದಾಸರು ಮಾಧ್ವಯತಿ ಮತ್ತು ವ್ಯಾಸತೀರ್ಥರಅನುಯಾಯಿ. ಇವರು ಶ್ರೀಮಂತಿಕೆಯನ್ನು ತ್ಯಜಿಸಿ ಸಂತನಾಗಿ,ವಿಠಲನ ಭಕ್ತನಾಗಿಭಕ್ತಿಚಳವಳಿಯ ನೇತಾರನೂಆದನು. ಅಲ್ಲದೆತನ್ನದೇಆದರಾಗದ ಮೂಲಕ ಕೀರ್ತನೆಗಳನ್ನು ಹಾಡಿಕರ್ನಾಟಕ ಸಂಗೀತದ ಪಿತಾಮಹನೆಂದೂ ಹೆಸರಾಗಿದ್ದಾನೆ. ಪುರಂದರದಾಸರುತಮ್ಮ ಸಂಗೀತವನ್ನು ಈ ಮಂಟಪದಲ್ಲಿ ಕುಳಿತು ಹಾಡುತ್ತಿದ್ದರೆಂದೂ ಹೇಳಲಾಗುತ್ತದೆ.
ಅರವತ್ತು ಕಂಬಗಳಿAದ ಆಯತಾಕಾರವಾಗಿಕಟ್ಟಲಾದ ಈ ವಿಶಾಲ ಮಂಟಪವು ಸರಳ ರಚನೆಯ ಕಂಬ, ಬೋದಿಗೆ ಮತ್ತು ತೊಲೆಗಳಿಂದ ಕೂಡಿದೆ. ಮೇಲ್ಛಾವಣಿಗೆಗಾರೆಗಚ್ಚಿನ ಹೊದಿಕೆಯನ್ನು ಹಾಕಿದ್ದಾರೆ. ಈ ಮಂಟಪದ ಮಧ್ಯದಒಂದುಕAಬದಲ್ಲಿ ಪುರಂದರದಾಸರ ಉಬ್ಬುಶಿಲ್ಪವನ್ನು ಇತ್ತೀಚೆಗೆಜೀಣೋದ್ಧಾರ ಸಂದರ್ಭದಲ್ಲಿಕಡೆದಿದ್ದು, ಪುರಂದರದಾಸರುತಮ್ಮಕೈಗಳಲ್ಲಿ ತಂಬೂರಿಯನ್ನು ಹಿಡಿದು ಕೀರ್ತನೆಗಳನ್ನು ಹಾಡುತ್ತಿರುವಂತಿದೆ. ಈ ಮಂಟಪವು ಮಳೆಗಾಲದಲ್ಲಿ ತುಂಗಭದ್ರಾ ನದಿಯ ಪ್ರವಾಹದಿಂದ ಸಂಪೂರ್ಣವಾಗಿ ಮುಳುಗುವುದು. ಪ್ರತಿವರ್ಷವೂ ಪುರಂದರದಾಸರ ನೆನಪಿಗಾಗಿ ಆರಾಧನೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಹೊಸಪೇಟೆತಾಲ್ಲೂಕಿಗೆೆ 16 ಕಿ.ಮೀ ಇರುತ್ತದೆ.
ಹತ್ತಿರವಿರುವ ಪ್ರವಾಸಿ ತಾಣಗಳು
• ತುಂಗಾಭದ್ರಾಜಲಾಶಯ, ಹೊಸಪೇಟೆತಾಲ್ಲೂಕು
• ದರೋಜಿಕರಡಿಧಾಮ, ಕಮಲಾಪುರ
• ಅಟಲ್ ಬಿಹಾರಿ ವಾಜಪೇಯಿಜೂಯಾಲಿಜಿಕಲ್ ಪಾರ್ಕ್, ಕಮಲಾಪುರ
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ
ರೈಲಿನಿಂದ
ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ.
ರಸ್ತೆ ಮೂಲಕ
ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.