ಅಂಕಸಮುದ್ರ ಪಕ್ಷಿಧಾಮ, ಹಗರಿಬೊಮ್ಮನಹಳ್ಳಿ ತಾಲೂಕು
ಅಂಕಸಮುದ್ರವು ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಹೊಸಪೇಟೆಯಿಂದ 30ಕಿ.ಮೀ ದೂರದಲ್ಲಿರುವಈ ಗ್ರಾಮದ ಪೂರ್ವಕ್ಕೆ ವಿಜಯನಗರಕಾಲದಲ್ಲಿ ನಿರ್ಮಿಸಲಾದ ವಿಸ್ತಾರವಾದಕೆರೆಯಿದೆ. ಇದು ಈ ಭಾಗದ ಪ್ರಸಿದ್ಧ ಪಕ್ಷಿಧಾಮವಾಗಿದೆ. ಈ ಕೆರೆಯು ಹಿಂದೆ ಮಳೆಯಾಶ್ರಿತ ನೀರನ್ನು ಹೆಚ್ಚಾಗಿ ಆಶ್ರಯಿಸಿತ್ತು. ಆದರೆ ಈಗ ತುಂಗಭದ್ರಾ ನದಿಯಿಂದಲೂ ನೀರನ್ನುತುಂಬಿಸುವ ಕಾರ್ಯಆರಂಭವಾಗಿದೆ. 244 ಎಕರೆಯಷ್ಟು ವಿಸ್ತಾರವಾದಈ ಕೆರೆಯಲ್ಲಿಸ್ಥಳೀಯವಾಗಿ ಬೆಳೆದ ಕರಿಜಾಲಿ ಮೊದಲಾದ ಮರ, ಗಿಡ ಮತ್ತು ಪೊದೆಗಳು ಪಕ್ಷಿಗಳಿಗೆ ಸುರಕ್ಷಿತಆಸರೆಯನ್ನು ಒದಗಿಸಿವೆ. ಚಳಿಗಾಲವುಆರಂಭವಾಗುತ್ತಲೇಜಗತ್ತಿನ ವಿವಿಧೆಡೆಗಳಿಂದ ವಿಭಿನ್ನಜಾತಿಯ ವೈವಿಧ್ಯಮಯ ಪಕ್ಷಿಗಳು ಇಲ್ಲಿಗೆವಲಸೆ ಬಂದುತಮ್ಮ ಗೂಡುಗಳನ್ನು ಕಟ್ಟಿ ಸಂತಾನವೃದ್ಧಿ ಮಾಡಿಕೊಳ್ಳುವ ನೆಚ್ಚಿನತಾಣವಾಗಿದೆ.ಈ ಕೆರೆಯಲ್ಲಿರುವ ಮೀನುಗಳಲ್ಲದೆ, ತುಂಗಭದ್ರಾ ಹಿನ್ನೀರಿನಲ್ಲಿರುವ ಮೀನು, ಕೀಟಗಳು ಇವುಗಳ ಆಹಾರವಾಗಿವೆ.
ಕಲ್ಯಾಣಕರ್ನಾಟಕ ಭಾಗದಅತ್ಯಂತಅಪರೂಪದ ಪಕ್ಷಿಧಾಮವಿದು. ವೈವಿಧ್ಯಮಯಪಕ್ಷಿಗಳ ಸುಂದರತಾಣವಾದ ಈ ಸ್ಥಳವನ್ನು ಸರ್ಕಾರವು2017ರಲ್ಲಿ ಪಕ್ಷಿಗಳ ಸಂರಕ್ಷಣಾ ಮೀಸಲು ನೆಲೆಯೆಂದುಘೋಷಿಸಿದೆ. ಇಲ್ಲಿ ಸುಮಾರು 240 ವಿವಿಧಜಾತಿಯ 35,000ಕ್ಕೂ ಹೆಚ್ಚು ಪಕ್ಷಿಗಳು ವಲಸೆಬಂದು ಸಂತಾನೋತ್ಪತ್ತಿಕಾರ್ಯದಲ್ಲಿತೊಡಗುತ್ತವೆಎAಬುದನ್ನುದಾಖಲಿಸಲಾಗಿದೆ. ಈ ಕೆರೆಯಲ್ಲಿಒಂಭತ್ತು ಬಗೆಯ ಮೀನಿನ ಪ್ರಭೇದಗಳಿವೆ. ಇಲ್ಲಿಗೆ ವಲಸೆ ಬರುವ ಪಕ್ಷಿಗಳಲ್ಲಿ ಬೆಳ್ಳಕ್ಕಿಗಳ ಹಿಂಡೇಇರುತ್ತದೆ. ಇವುಗಳಲ್ಲದೆ ಬಾತುಕೋಳಿಗಳು, ಕೋಳದ ಬೆಳ್ಳಕ್ಕಿಗಳು, ಚಿಕ್ಕ ಬೆಳ್ಳಕ್ಕಿಗಳು, ಶಿಳ್ಳೆ ಬಾತುಕೋಳಿಗಳು, ನೀರು ಕಾಗೆ(ಕಾರ್ಮೊರೆಂಟ್), ಹೆಜ್ಜಾರ್ಲೆ, ಬೂದು ಬಕ, ಭಾರತೀಯಕಾರ್ಮೊರೆಂಟ್, ಗ್ರೇಟ್‌ಕಾರ್ಮೊರೆಂಟ್, ಬೂದುಬಣ್ಣದ ಹೆರಾನ್, ಕೆನ್ನೇರಳೆಬೆಳ್ಳಕ್ಕಿಗಳು, ನೈಟ್ ಹೆರಾನ್, ಕ್ಯಾಟಲ್‌ಈಗ್ರೇಟ್, ಕಪ್ಪು ಮತ್ತು ಬಿಳಿಬಣ್ಣದ ಐಬಿಸ್,ಬುಲ್‌ಬುಲ್, ಇಬಿಸ್, ಸ್ಟಾರ್ಕ್ಸ್ ಮೊದಲಾದ150ಕ್ಕೂ ಹೆಚ್ಚು ಪ್ರಭೇದಗಳ ವೈವಿಧ್ಯಮಯ ಪಕ್ಷಿಸಂಕುಲವೇ ಇಲ್ಲಿ ನೆಲೆಸುವುದುಗಮನಾರ್ಹ.
ಜಾಗತಿಕವಾಗಿ ಅಳಿವಿನ ಅಂಚಿನಲ್ಲಿರುವಅನೇಕ ಪಕ್ಷಿಗಳೂ ಇಲ್ಲಿಗೆ ಬಂದು ಸಂತಾನೋತ್ಪತ್ತಿಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಈ ಸಂರಕ್ಷ್ಷಿತ ಪಕ್ಷಿಧಾಮವನ್ನುರಕ್ಷಿಸುವಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನಿಂದಅAಕಸಮುದ್ರ ಪಕ್ಷಿಧಾಮಕ್ಕೆ1.6 ಕಿ.ಮೀ ಇರುತ್ತದೆ.
ಹತ್ತಿರವಿರುವ ಪ್ರವಾಸಿ ತಾಣಗಳು
• ತುಂಗಾಭದ್ರಾಜಲಾಶಯ
• ಹಂಪಿಯ ಪ್ರಮುಖ ಪ್ರವಾಸಿ ತಾಣಗಳು
• ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಮತ್ತುಕುರುವತ್ತಿಯಮಲ್ಲಿಕಾರ್ಜುನ ದೇವಾಲಯಗಳು
• ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಮತ್ತು ಉಚ್ಚಂಗಿ ದುರ್ಗಾದೇವಾಲಯ
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ
ರೈಲಿನಿಂದ
ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ
ರಸ್ತೆ ಮೂಲಕ
ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.