ಕೊಟ್ಟೂರು ಬಸವೇಶ್ವರ-ಕೊಟ್ಟೂರು
ಕೊಟ್ಟೂರುಗ್ರಾಮವು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಆಡಳಿತ ಮತ್ತು ವ್ಯಾಪಾರಕೇಂದ್ರವಾಗಿತ್ತು. ಕೊಟ್ಟೂರು 11-12ನೆಯ ಶತಮಾನದಲ್ಲಿ ಕೊಗಳಿ-300ರ ಆಡಳಿತ ಘಟಕವೂಆಗಿತ್ತು. ಇದನ್ನುಕೊಟ್ಟೂರು ಸೀಮೆ, ಕೊಟ್ಟೂರುಚಾವಡಿಎಂದೆಲ್ಲಾ ಶಾಸನಗಳಲ್ಲಿ ಕರೆಯಲಾಗಿದೆ.ಇಲ್ಲಿಕಲ್ಯಾಣಚಾಲುಕ್ಯರಕಾಲದಲ್ಲಿ ನಿರ್ಮಾಣವಾದಗದ್ದೆಕಲ್ಲೇಶ್ವರ, ತ್ರಿಕೂಟದೇವಾಲಯವದಮೂರುಕಲ್ಲು ಮಠ ಹಾಗೂ ಪ್ರಾಚೀನ ಶಾಸನಗಳು ಪ್ರಮುಖ ಸಾಕ್ಷö್ಯಗಳಾಗಿವೆ.
ಕೊಟ್ಟೂರು ಪ್ರಸಿದ್ಧಿ ಹೊಂದಿರುವುದುಅಲ್ಲಿನಕೊಟ್ಟೂರು ಬಸವೇಶ್ವರ ಶರಣರಿಂದ. ಪಂಚಗಣಾಧೀಶ್ವರರಲ್ಲಿಒಬ್ಬರಾದ ಯತಿಗಳೂ, ಗುರುಗಳೂ ಆದ ಬಸವೇಶ್ವರರು ನೆಲೆನಿಂತತಾಣವಿದು. ಬಸವೇಶ್ವರರುಕೊಟ್ಟೂರನ್ನೇತಮ್ಮಕ್ಷೇತ್ರವನ್ನಾಗಿ ಮಾಡಿಕೊಂಡ ಹಿನ್ನೆಲೆಯಲ್ಲಿಅವರುಕೊಟ್ಟೂರು ಬಸವೇಶ್ವರ, ಕೊಟ್ಟೂರೇಶ್ವರಎಂದೇ ಹೆಸರಾಗಿದ್ದಾರೆ. ಇದರಜೊತೆಗೆಇನ್ನೆರಡು ಪ್ರಮುಖ ಸ್ಮಾರಕಗಳೆಂದರೆ ತೊಟ್ಟಿಲು ಮಠ, ಗಚ್ಚಿನ ಮಠಗಳು. ಇವುಗಳಲ್ಲದೆ ಕೊಟ್ಟೂರೇಶ್ವರದೇವಾಲಯವುಕೊಟ್ಟೂರು ಬಸವೇಶ್ವರರಆರಾದನೆಯ ಪ್ರಮುಖಕೇಂದ್ರವಾಗಿದೆ. ಗರ್ಭಗೃಹ, ಕಟಾಂಜನವುಳ್ಳ ವಿಶಾಲವಾದ ಸಭಾಮಂಟಪ ಹಾಗೂ ಮುಖಮಂಟಪಗಳನ್ನು ಒಳಗೊಂಡಿದೆ. ಇದನ್ನುದರ್ಭಾರ್ ಮಠವೆಂತಲೂಕರೆಯುವರು. ಗರ್ಭಗೃಹದಲ್ಲಿಎತ್ತರವಾದಗದ್ದುಗೆಯ ಮೇಲೆ ಶೀಗಳ ಪ್ರತಿಮೆ ಮತ್ತು ಶಿವಲಿಂಗಗಳಿವೆ. ವಿಜಯನಗರೋತ್ತರಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯದ ಕಂಬಗಳು ನೆಗೆಯುತ್ತಿರುವ ಸಿಂಹ, ಯಾಳಿಗಳಿಂದ ಕೂಡಿವೆ. ಕಂಬಗಳ ಮೇಲೆ ಶಿವ, ಪಾರ್ವತಿ, ನರ್ತಕಿ, ಯತಿ, ನರಸಿಂಹ ಮುಂತಾದ ಉಬ್ಬುಶಿಲ್ಪಗಳಿವೆ. ಮುಂಬದಿಯಕೈಪಿಡಿಗೋಡೆಯಲ್ಲಿ ವಿವಿಧದೇವತಾ ಗಾರೆಶಿಲ್ಪಗಳನ್ನು ರಚಿಸಿದ್ದಾರೆ.
ಗಚ್ಚಿನ ಮಠವುಕೊಟ್ಟೂರೇಶ್ವರ ಸ್ವಾಮಿಗಳು ಸಮಾಧಿಯಾದ ನೆಲೆ. ಇದನ್ನುಯೋಗ ಸಮಾಧಿ ಸ್ಥಳವೆಂದೂ ಕರೆಯುವರು. ಇದುಕೂಡ ವಿಜಯನಗರ ಶೈಲಿಯ ನಲವತ್ತು ಕಂಬಗಳನ್ನಾಧರಿಸಿ ನಿರ್ಮಿಸಲಾದ ವಿಸ್ತಾರದೇಗುಲ. ಗರ್ಭಗೃಹದಲ್ಲಿ ಶ್ರೀಗಳ ಸಮಾಧಿಯುಳ್ಳ ಗದ್ದುಗೆಯಿದ್ದು, ಅದರ ಮೇಲೆ ಲೋಹದ ಮಂಟಪವನ್ನಿಟ್ಟು, ಅದರಲ್ಲಿ ಶ್ರೀಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.
ತೊಟ್ಟಿಲು ಮಠವುಕೊಟ್ಟೂರೇಶ್ವರರ ಹೆಸರಿನಲ್ಲಿ ನಿರ್ಮಿಸಲಾದಇನ್ನೊಂದುದೇಗುಲ. ಇದುಗರ್ಭಗೃಹ, ಸಭಾಮಂಟಪ, ಮುಖಮಂಟಗಳಲ್ಲದೆ ವಿಶಾಲವಾದ ಪ್ರಾಕಾರ ಮತ್ತು ಮಹಾದ್ವಾರಗೋಪುರಗಳನ್ನು ಹೊಂದಿದೆ. ಗರ್ಭಗೃಹದಲ್ಲಿಎತ್ತರದಗದ್ದುಗೆಯಿದ್ದುಗದ್ದುಗೆಯ ಮೇಲಿನ ಲೋಹದ ಮಂಟಪದಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿರುವರು.
ಕೊಟ್ಟೂರೇಶ್ವರಜಾತ್ರಾರಥೋತ್ಸವವು ಈ ಭಾಗದ ಪ್ರಸಿದ್ಧ ಜಾತ್ರೆಯಾಗಿದೆ. ಪ್ರತಿವರ್ಷವೂ ಮಾಘ ಮಾಸದಜೇಷ್ಠ ದಿನದಂದುಕೊಟ್ಟೂರೇಶ್ವರ ಮಹಾರಥೋತ್ಸವವುಅತ್ಯಂತ ವಿಜೃಂಭಣೆಯಿAದಜರುಗುತ್ತಾ ಬಂದಿರುವುದುಗಮನಾರ್ಹ.
ಕೊಟ್ಟೂರುತಾಲ್ಲೂಕಿಗೆೆ 00 ಕಿ.ಮೀ ಇರುತ್ತದೆ.
ಹತ್ತಿರವಿರುವ ಪ್ರವಾಸಿ ತಾಣಗಳು
• ಕೋಟ್ಟೂರುತಾಲ್ಲೂಕಿನಉಜ್ಜಿನಿ ಪೀಠ
• ಜರಿಮಲೆ ಮತ್ತುಗುಡೇಕೋಟೆ, ಕೂಡ್ಲಿಗಿತಾಲ್ಲೂಕು
• ಹಂಪಿ &ತುಂಗಾಭದ್ರಾ ಜಲಾಶಯಗಳು, ಹೊಸಪೇಟೆತಾಲ್ಲೂಕು
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ
ರೈಲಿನಿಂದ
ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ
ರಸ್ತೆ ಮೂಲಕ
ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.