ವಿಜಯನಗರಯು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಮುಖ ನಗರಗಳಿಗೆ ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ನೀವು ವಿಮಾನ, ರೈಲು ಅಥವಾ ಬಸ್ ಮೂಲಕ ಪ್ರಯಾಣಿಸಬಹುದಾಗಿದ್ದು, ವಿಜಯನಗರ ಭೇಟಿ ನೀಡಲು ಯೋಜಿಸುತ್ತಿದ್ದರೆ ನಿಯಮಿತ ವಿಮಾನಗಳು ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಹೈದರಾಬಾದ್ (ಯುಡಿಎಎನ್ ಅಡಿ) ಲಭ್ಯವಿವೆ.
ಸಾರಿಗೆ | ಸಂಪರ್ಕ |
---|---|
ರಸ್ತೆ |
ವಿಜಯನಗರ ಜಿಲ್ಲೆಯು ಬಸ್ನಿಂದ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ನೆರೆಯ ರಾಜ್ಯಗಳ ನಗರಗಳಿಗೂ ಬಸ್ಸುಗಳು ಲಭ್ಯವಿವೆ. |
ರೈಲು |
ವಿಜಯನಗರ ರೈಲು, ಬೆಂಗಳೂರು, ರಾಯಚೂರು, ತಿರುಪತಿ, ಹುಬ್ಬಳ್ಳಿ, ಗುಂತಕಲ್ , ವಿಜಯವಾಡ,ಗುಂಟಕಲ್ ಅನೇಕ ಪ್ರಮುಖ ರೈಲುಗಳು ಹಾದುಹೋಗುವ ಬಳ್ಳಾರಿ ಬಳಿ ಪ್ರಮುಖ ಜಂಕ್ಷನ್ ಆಗಿದೆ ದೆಹಲಿ, ಚೆನ್ನೈ, ಮುಂಬೈ ಮತ್ತು ಭಾರತದ ಹೆಚ್ಚಿನ ಸ್ಥಳಗಳಿಗೆ ರೈಲುಗಳು ಈ ಜಂಕ್ಷನ್ನಿಂದ ಲಭ್ಯವಿದೆ. |
ವಾಯುಮಾರ್ಗ |
ಜಿಂದಾಲ್ ವಿಮಾನ ನಿಲ್ದಾಣದಿಂದ (ವಿಜಯನಗರ ನಗರದಿಂದ 30 ಕಿ.ಮೀ. ಇದೆ ) ದೈನಂದಿನ ವಿಮಾನಗಳು ಲಭ್ಯವಿದೆ UDAAN ಯೋಜನೆ ಅಡಿಯಲ್ಲಿ ಬೆಂಗಳೂರು ಮತ್ತು ಹೈದರಾಬಾದ್ಗಳಿಗೆ. |