Close

ಸಂಸ್ಕೃತಿ ಮತ್ತು ಪರಂಪರೆ

ವಿಜಯನಗರ ಜಿಲ್ಲೆಯು , ವಿಜಯನಗರ ಸಾಮ್ರಾಜ್ಯದ ಕಾಲದಿಂದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಜಿಲ್ಲೆಯು ನಾಟಕ, ಸಂಗೀತ, ಚಿತ್ರಕಲೆ,  ಸಾಹಿತ್ಯ, ನೃತ್ಯ, ಜಾನಪದ ಹಾಗು ಇತರೆ ಕಲೆಗಳಲ್ಲಿ ನುರಿತ ಕಲಾವಿದರು ಹಾಗು ಕಲಾತಂಡಗಳನ್ನು ಹೊಂದಿದೆ. ಜಿಲ್ಲೆಯ ಕನ್ನಡ ವಿಶ್ವವಿದ್ಯಾನಿಲಯವು ಸಾಹಿತ್ಯ, ಸಂಗೀತ  ಮತ್ತು ಕಲೆಗಳಿಗೆ ಸಂಬಂಧಿಸಿದ ಪದವಿ ಕೋರ್ಸಗಳನ್ನು ನಡೆಸುತ್ತಿದ್ದು ಇದು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ಸಹಕಾರಿಯಾಗಿದೆ. ಜಿಲ್ಲೆಯಾದ್ಯಂತ ಅನೇಕ ಜಾನಪದ ಕಲಾವಿದರು ಕಲೆಯನ್ನು ಜೀವಂತವಾಗಿರಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಹಂಪಿ ಉತ್ಸವ , ರಾಜ್ಯದ ಮಹತ್ವದ ಕಲೋತ್ಸವವಾಗಿದ್ದು, ನಾಡಿನ ಖ್ಯಾತ ಕಲಾವಿದರು ಇದರಲ್ಲಿ ಭಾಗವಹಿಸುವುದರೊಂದಿಗೆ ಈ ಉತ್ಸವವು ಜನೋತ್ಸವವಾಗಿ ವಿಜೃಂಭಣೆಯಿಂದ ನಡೆಯುತ್ತದೆ. ಜಿಲ್ಲೆಯ ಅನೇಕ ಸಾಂಸ್ಕೃತಿಕ ಸಂಘಟೆನೆಗಳು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.  ಜಿಲ್ಲೆಯ ಹಂಪಿಯು ವಿಶ್ವ ಪಾರಂಪರಿಕ ತಾಣವಾಗಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದ ಅನೇಕ ಉತ್ಕೃಷ್ಠ ಸ್ಮಾರಕಗಳನ್ನು ಹೊಂದಿದೆ. ದೇಶವಿದೇಶಗಳಿಂದ ಅನೇಕ ಪ್ರವಾಸಿಗರು ಈ ಸ್ಮಾರಕಗಳನ್ನು ವೀಕ್ಷಿಸಲು ಆಗಮಿಸುತ್ತಾರೆ.