Close

ಅಂತರ್ಜಾಲ ನೀತಿಗಳು

ಬಳಕೆಯ ನಿಬಂಧನೆಗಳು

ವಿಜಯನಗರ ಅಂತರ್ಜಾಲದ ಒಳಾಂಶವನ್ನು ನಿರ್ವಹಿಸುತ್ತದೆ.
ಈ ಅಂತರ್ಜಾಲದಲ್ಲಿನ ಒಳಾಂಶದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದಾಗ್ಯೂ, ಅದನ್ನು ಕಾನೂನಿನ ಒಂದು ಹೇಳಿಕೆಯಂಬಂತೆ ಅರ್ಥೈಸಿಕೊಳ್ಳತಕ್ಕದ್ದಲ್ಲ ಅಥವಾ ಯಾವುದೇ ಕಾನೂನಿನ ಉದ್ದೇಶಗಳಿಗಾಗಿ ಬಳಸಿಕೊಳ್ಳತಕ್ಕದ್ದಲ್ಲ. ಯಾವುದೇ ಸಂದರ್ಭದಲ್ಲೂ, ಜಿಲ್ಲೆಯು(ಜಿಲ್ಲೆಯ ಹೆಸರು), ಪರಿಮಿತಿ ಇಲ್ಲದೇ ಈ ಪೋರ್ಟಲ್ನ ಬಳಕೆಯಿಂದ ಅಥವಾ ಆ ಸಂಬಂಧದಲ್ಲಿ ಉದ್ಭವಿಸುವ ದತ್ತಾಂಶದ (ಡಾಟಾ) ಬಳಕೆಯಿಂದ ಅಥವಾ ಬಳಕೆಯ ನಷ್ಟದಿಂದ ಉದ್ಭವಿಸುವ ಯಾವುದೇ ರೀತಿಯ ಪರೋಕ್ಷ ಅಥವಾ ತತ್ಪರಿಣಾಮದ ನಷ್ಟ ಅಥವಾ ಹಾನಿ ಅಥವಾ ಯಾವುದೇ ವೆಚ್ಚವೂ ಸೇರಿದಂತೆ, ಯಾವುದೇ ವೆಚ್ಚ ಅಥವಾ ನಷ್ಟ ಅಥವಾ ಹಾನಿಗೆ ಹೊಣೆಯಾಗುವುದಿಲ್ಲ. ಸಾರ್ವಜನಿಕರ ಅನೂಕೂಲಕ್ಕಾಗಿ ಮಾತ್ರ ಈ ಪೋರ್ಟಲ್ನಲ್ಲಿ ಒಳಗೊಂಡಿರುವ ಇತರೆ ಅಂತರ್ಜಾಲಗಳಿಗೆ ಸಂಪರ್ಕಗಳನ್ನು ಕಲ್ಪಿಸಲಾಗಿರುತ್ತದೆ. ಎಲ್ಲಾ ಸಮಯದಲ್ಲೂ, ಇಂಥ ಸಂಪರ್ಕಿತ ಪುಟಗಳು ಲಭ್ಯವಾಗುವುವು ಎಂಬುದರ ಬಗ್ಗೆ ನಾವು ಭರವಸೆ ನೀಡಲಾರೆವು. ಈ ನಿಬಂಧನೆಗಳು ಮತ್ತು ಷರತ್ತುಗಳನ್ನು ಭಾರತದ ಕಾನೂನುಗಳಿಗನುಸಾರವಾಗಿ ನಿಯಂತ್ರಿಸತಕ್ಕದ್ದು ಮತ್ತು ಅಥೈರ್ಸತಕ್ಕದ್ದು. ಈ ನಿಬಂಧನೆಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದವು, ಭಾರತದ ನ್ಯಾಯಾಲಯಗಳ ಅನನ್ಯ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರತಕ್ಕದ್ದು.

ಕೃತಿ ಸ್ವಾಮ್ಯ ನೀತಿ

 ಈ ಅಂತರ್ಜಾಲದಲ್ಲಿ ಪ್ರಕಟಿಸಿದ ಮಾಹಿತಿಯನ್ನು, ನಮಗೆ ಒಂದು ಇ-ಮೇಲ್ ಕಳುಹಿಸುವ ಮೂಲಕ ಸೂಕ್ತ ಅನುಮತಿ ಪಡೆದುಕೊಂಡ ತರುವಾಯ ವೆಚ್ಚರಹಿತವಾಗಿ (ಉಚಿತವಾಗಿ) ಯಥಾವತ್ತಾಗಿ ಪ್ರತಿ ಮಾಡಿಕೊಳ್ಳಬಹುದಾಗಿದೆ. ಆದಾಗ್ಯೂ, ಈ ಮಾಹಿತಿಯನ್ನು ಕರಾರುವಾಕ್ಕಾಗಿ ಪ್ರತಿ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಇದನ್ನು ಅನುಚಿತವಾದ ಅಥವಾ ತಪ್ಪುದಾರಿಗೆ ಎಳೆಯುವ ರೀತಿಯಲ್ಲಿ ಬಳಸಿಕೊಳ್ಳಬಾರದು. ಮಾಹಿತಿಯನ್ನು ಪ್ರಕಟಿಸುತ್ತಿರುವ ಅಥವಾ ಇತರರಿಗೆ ನೀಡುತ್ತಿರುವ ಕಡೆಗಳಲ್ಲಿ, ಮಾಹಿತಿಯನ್ನು ಪಡೆದ ಮೂಲದ (Source) ಬಗ್ಗೆ ಎದ್ದುಕಾಣುವಂತೆ /ಕೃತಜ್ಞತೆಯಿಂದ ಸ್ಮರಿಸಬೇಕು. ಆದಾಗ್ಯೂ, ಈ ಮಾಹಿತಿಯನ್ನು ಯಥಾವತ್ತಾಗಿ ಪ್ರತಿ ಮಾಡಿಕೊಳ್ಳಲು ನೀಡಿದ ಅನುಮತಿಯನ್ನು ಮೂರನೇ ಪಕ್ಷಕಾರನ ಕೃತಿಸ್ವಾಮ್ಯವಾಗಿರುವುದೆಂದು ಗುರುತಿಸಲಾಗಿರುವ ಯಾವುದೇ ಮಾಹಿತಿಗೆ ವಿಸ್ತರಿಸತಕ್ಕದ್ದಲ್ಲ. ಅಂಥ ಮಾಹಿತಿಯನ್ನು ಯಥಾವತ್ತಾಗಿ ಪ್ರತಿ ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಂದ/ ಕೃತಿಸ್ವಾಮ್ಯಧಾರಕರಿಂದ ಮಂಜೂರಾತಿಯನ್ನು ಪಡೆಯಬೇಕು.

ಗೌಪ್ಯತಾ ನೀತಿ

ಈ ಜಾಲಾತಾಣವು, ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ನಮಗೆ ಅನುವಾಗುವಂಥ ಯಾವುದೇ ನಿದಿರ್ಷ್ಟ ವೈಯಕ್ತಿಕ (ಹೆಸರು, ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸಗಳಂಥ) ಮಾಹಿತಿಯನ್ನು ನಿಮ್ಮಿಂದ ಸ್ವಯಂ ಆಗಿ ತೆಗೆದುಕೊಳ್ಳುವುದಿಲ್ಲ.
ಅಂತರ್ಜಾಲವು ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ನಿಮ್ಮನ್ನು ಕೋರಿದರೆ, ಯಾವ ನಿರ್ದಿಷ್ಟ ಉದ್ದೇಶಗಳಿಗೆ ಮಾಹಿತಿಯನ್ನು ಸಂಗ್ರಹಿಸಲಾಗುವುದೋ ಆ ನಿರ್ದಿಷ್ಟ ಉದ್ದೇಶವನ್ನು ನಿಮಗೆ ತಿಳಿಸಲಾಗುತ್ತದೆ. ಉಧಾಹರಣೆಗೆ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು ಮಾಹಿತಿ ಪಡೆಯುವ ನಮೂನೆಯನ್ನು (Feedback Form) ಬಳಸಲಾಗುವುದು ಹಾಗೂ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಜಾಲಾತಾಣದಲ್ಲಿ ನೀವು ಸ್ವಇಚ್ಚೆಯಿಂದ ನೀಡಿರುವ ವೈಯಕ್ತಿಕವಾಗಿ ಗುರುತಿಸಬಹುದಾದ ಯಾವುದೇ ಮಾಹಿತಿಯನ್ನು ನಾವು ಯಾರೇ ಮೂರನೇ ಪಕ್ಷಕಾರನಿಗೆ (ಸಾರ್ವಜನಿಕ/ ಖಾಸಗಿ) ಮಾರುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ.
ಈ ಜಾಲಾತಾಣಕ್ಕೆ ಒದಗಿಸಿರುವ ಯಾವುದೇ ಮಾಹಿತಿಯನ್ನು ನಷ್ಟ, ದುರ್ಬಳಕೆ, ಅನಧಿಕೃತವಾಗಿ ಪಡೆದುಕೊಳ್ಳವುದು ಅಥವಾ ಬಹಿರಂಗಪಡಿಸುವುದು, ಬದಲಾಯಿಸುವುದು ಅಥವಾ ನಾಶಪಡಿಸುವುದರಿಂದ ರಕ್ಷಿಸಲಾಗುವುದು.
ಅಂತರ್ಜಾಲ ಪ್ರೋಟೋಕಾಲ್ (IP) ವಿಳಾಸಗಳು, ಕ್ಷೇತ್ರದ ಹೆಸರು, ಬ್ರೌಸರ್ ವಿಧ, ಅಪರೇಟಿಂಗ್ ಸಿಸ್ಟಮ್, ಜಾಲತಾಣಕ್ಕೆ ಭೇಟಿ ನೀಡಿರುವ ದಿನಾಂಕ ಮತ್ತು ಸಮಯ ಹಾಗೂ ಭೇಟಿ ನೀಡಿರುವ ಪುಟಗಳು ಮುಂತಾದಂತಹ ಬಳಕೆದಾರನಿಗೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನು ನಾವು ಸಂಗ್ರಹಿಸುತ್ತೇವೆ. ನಾವು, ಜಾಲತಾಣವನ್ನು ನಾಶ ಮಾಡಲು ಮಾಡಿದ ಪ್ರಯತ್ನಗಳನ್ನು ಪತ್ತೆ ಮಾಡಲು ಬಳಸಲಾಗುತ್ತದೆ , ನಮ್ಮ ಜಾಲತಾಣಕ್ಕೆ ಭೇಟಿ ನೀಡಿರುವ ವ್ಯಕ್ತಿಗಳ ಗುರುತಿನೊಂದಿಗೆ ಈ ವಿಳಾಸಗಳನ್ನು ಸಂಪರ್ಕಿಸುವ ಯಾವುವೇ ಪ್ರಯತ್ನಗಳನ್ನು ಮಾಡುವುದಿಲ್ಲ.

ಹೆಚ್ಚಿನ ಸಂಪರ್ಕ ಕಲ್ಪಿಸುವ ನೀತಿ (ಹೈಪರ್ ಲಿಂಕಿಂಗ್ ಪಾಲಿಸಿ)

ಬಾಹ್ಯ ಜಾಲತಾಣಗಳು/ ಪೋರ್ಟಲ್ಗಳಿಗೆ ಸಂಪರ್ಕ ಕಲ್ಪಿಸುವುದು:

 ಈ ಜಾಲತಾಣದಲ್ಲಿನ ಹಲವು ತಾಣಗಳಲ್ಲಿ, ಇತರ ಜಾಲತಾಣಗಳು / ಪೋರ್ಟಲ್ಗಳಿಗೆ ಸಂಪರ್ಕ ಕಲ್ಪಿಸಿರುವುದು ನಿಮಗೆ ಕಂಡುಬರುತ್ತದೆ. ಈ ಸಂಪರ್ಕಗಳನ್ನು ನಿಮ್ಮ ಅನುಕೂಲಕ್ಕಾಗಿ ಒದಗಿಸಲಾಗಿದೆ. ಈ ಸಂಪರ್ಕಗಳು ಎಲ್ಲಾ ಸಮಯದಲ್ಲೂ ಕಾರ್ಯನಿರ್ವಹಿಸುತ್ತವೆ ಎಂದು ನಾವು ಭರವಸೆ ನೀಡಲಾಗುವುದಿಲ್ಲ ಮತ್ತು ಸಂಪರ್ಕ ಕಲ್ಪಿಸಿರುವ ಪುಟಗಳ ಲಭ್ಯತೆಯ ಮೇಲೆ ನಾವು ಯಾವುದೇ ರೀತಿಯ ನಿಯಂತ್ರಣವನ್ನು ಹೊಂದಿರುವುದಿಲ್ಲ.