Close

ಮಲ್ಲಿಕಾರ್ಜುನ ದೇವಸ್ಥಾನ, ಕುರುವತ್ತಿ, ಹೂವಿನ ಹಡಗಲಿ ತಾಲೂಕು

ವರ್ಗ ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಲ್ಯಾಣಚಾಲುಕ್ಯರಕಾಲದಲ್ಲಿ ನಿರ್ಮಾಣವಾದ ಪ್ರಸಿದ್ಧ ದೇವಾಲಯಗಳಲ್ಲಿ ಕುರುವತ್ತಿಯ ಮಲ್ಲಿಕಾರ್ಜುನದೇವಾಲಯವೂಒಂದು. ೧೦೮೭ರ ಹೊತ್ತಿಗೆ ನಿರ್ಮಿಸಲಾದ ಈ ದೇವಾಲಯವುಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿ ಮಂಟಪಗಳನ್ನು ಹೊಂದಿದ ಸುಂದರ ಹಾಗೂ ಸೂಕ್ಷö್ಮ ಕೆತ್ತನೆಗಳನ್ನು ಒಳಗೊಂಡಿದೆ..ಗರ್ಭಗೃಹದಲ್ಲಿ ಕಪ್ಪುಶಿಲೆಯ ನಯವಾದ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು. ಗರ್ಭಗೃಹದ ಪ್ರವೇಶದ್ವಾರವುಐದು ಬಗೆಯ ಶಾಖೆಗಳಾದ ವಜ್ರಾಕೃತಿ, ನಾಗಬಂಧ, ಪೂರ್ಣಕುಂಭ, ಮಿಥುನ ಹಾಗೂ ಹೂಬಳ್ಳಿ ಶಾಖೆಗಳನ್ನು ಸೂಕ್ಷö್ಮವಾಗಿ ಕಂಡರಿಸಿರುವರು. ಬಾಗಿಲುವಾಡದ ಲಲಾಟದಲ್ಲಿಗಜಲಕ್ಷಿö್ಮಯ ಸುಂದರ ಉಬ್ಬುಶಿಲ್ಪವಿದೆ. ಗರ್ಭಗೃಹದ ಮುಂಭಾಗದತೆರೆದ ಅಂತರಾಳದಲ್ಲಿ ಎರಡು ಕಂಬಗಳ ಮೇಲೆ ಸುಂದರಕೆತ್ತನೆಯತೋರಣವಿದೆ. ಇದರಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ಸಮಭಂಗಿಯಲ್ಲಿ ನಿಂತಿರುವರು. ಇವರ ಇಕ್ಕೆಲಗಳಲ್ಲಿ ಛಾಮರಧಾರೆಯರು ನಿಂತಿದ್ದಾರೆ. ಅಂತರಾಳದ ಮುಂಭಾಗದ ನವರಂಗದಲ್ಲಿ ನಾಲ್ಕು ಸೂಕ್ಷö್ಮಕೆತ್ತನೆಯ ಕಂಬಗಳಿವೆ. ಈ ಕಂಬಗಳ ಕೆಳಭಾಗವು ಚಚ್ಚೌಕವಾಗಿದ್ದು, ಇದರ ನಾಲ್ಕು ಮುಖಗಳಲ್ಲಿ ರೇಖಾ ನಾಗರ ಶೈಲಿಯಚಿಕ್ಕದಾದ ಶಿಖರಗಳನ್ನು ಕಡೆದಿರುವರು. ಅಲ್ಲದೆ ಈ ಕಂಬಗಳಲ್ಲಿ ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಕಾಳಿ ಮತ್ತು ಸರಸ್ವತಿಯರನ್ನು ಮೂಡಿಸಲಾಗಿದೆ. ನವರಂಗಕ್ಕೆ ಪೂರ್ವ, ಉತ್ತರ ಮತ್ತುದಕ್ಷಿಣ ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳಿವೆ. ಪೂರ್ವ ದಿಕ್ಕಿನ ಮುಖ್ಯದ್ವಾರವನ್ನು ಸ್ತಿçÃಯರು, ಅರೆಗಂಬ ಹಾಗೂ ವಿವಿಧ ಶಾಖೆಗಳಿಂದ ಅಲಂಕರಿಸಿರುವರು. ಮುಖಮಂಟಪದ ಕಂಬಗಳು ಸೂಕ್ಷö್ಮ ಕೆತ್ತನೆಗಳಂದ ಕೂಡಿದ್ದು, ಇªÄದನಿಕೆಯರ ಶಿಲ್ಪಗಳನ್ನೂ ಸ್ಥಾಪಿಸಿರುವುದು ಗಮನೀಯ ಸಂಗತಿ.
ದೇವಾಲಯದ ಹೊರಭಾಗವುಅಧಿಷ್ಠಾನವು ಉಪಾನ, ಜಗತಿ, ಕಂಠ ಹಾಗೂ ಕುಮುದಗಳಿಂದ ಅಲಂಕೃತಗೊAಡಿದ್ದು, ಭಿತ್ತಿಯಲ್ಲಿಅರೆಗಂಬ, ಶಿಖರ ಮಾದರಿ, ಕೀರ್ತಿಮುಖಗಳ ಅಲಂಕಾರಗಳಿವೆ. ಇವುಗಳಲ್ಲದೆ ಗೋಡೆಯಲ್ಲಿ ಆನೆ, ಯಕ್ಷ, ಗಂದರ್ವ, ಭೈರವ, ಗಣೇಶ, ಕಾರ್ತಿಕೇಯ, ರಾಮ-ಲಕ್ಷö್ಮಣ, ವಾಲಿ-ಸುಗ್ರೀವರಕದನ, ಹೂಬಳ್ಳಿಗಳಿಂದ ಕೂಡಿದ ಸೂಕ್ಷö್ಮ ಕೆತ್ತನೆಗಳಿರುವುದು ಗಮನಾರ್ಹ.
ಗರ್ಭಗೃಹದ ಮೇಲ್ಭಾಗದಲ್ಲಿ ವೇಸರ ಶೈಲಿಯ ಶಿಖರವಿದ್ದು, ಮುಂಭಾಗದಲ್ಲಿ ಮುಂಚಾಚಿದ ಸುಖನಾಸವೂ ಇದೆ. ಮಲ್ಲಿಕಾರ್ಜುನದೇವಾಲಯದ ಮುಂಬದಿಯಲ್ಲಿ ನಂದಿಗೆAದೇ ಪ್ರತ್ಯೇಕವಾಗಿ ನಿರ್ಮಿಸಲಾದ ನಂದಿಯದೇಗುಲವಿದೆ. ಇದರಲ್ಲಿ ಸುಂದರವಾಗಿಕಡೆದು ನಯಗೊಳಿಸಿ ವಿವಿಧದಂಡೆ, ಲೊಡಗ, ಗಂಟೆ ಸರಗಳಿಂದ ಅಲಂಕೃತಗೊAಡ ಬೃಹತ್‌ಗಾತ್ರದ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದುಕುರುವತ್ತಿ ಬಸವಣ್ಣನೆಂದೇ ಪ್ರಸಿದ್ಧಿಯಾಗಿದೆ. ಶಿವರಾತ್ರಿಯ ಸಮಯದಲ್ಲಿ ವಿಶೇಷವಾಗಿ ರಥೋತ್ಸವ ವಿಜೃಂಭಣೆಯಿAದಜರುಗುತ್ತದೆ.
ಈ ಗ್ರಾಮದಲ್ಲಿಒಟ್ಟು ೨೨ ಶಿಲಾಶಾಸನಗಳಿವೆ. ಅವುಗಳಲ್ಲಿ ಮಲ್ಲಿಕಾರ್ಜುನದೇವರನ್ನು ಚಾಳುಕ್ಯ ಮಲ್ಲೇಶ್ವರ(೧೦೮೭), ಅಭಿನವ ಸೋಮೇಶ್ವರ(೧೦೯೯), ಆಹವಮಲ್ಲೇಶ್ವರ(೧೧೦೪), ಮಲ್ಲಿಕಾರ್ಜುನ(೧೬ನೆಯ ಶತಮಾನ)ನೆಂದುಕಾಲಾAತರದಲ್ಲಿಕರೆಯಲಾಗಿದೆ. ಈ ದೇವಾಲಯದಲ್ಲಿಅಂಜಲಿ ಮುದ್ರೆಯಲ್ಲಿಕೈಮುಗಿದು ನಿಂತ ಭಕ್ತಶಿಲ್ಪಗಳಿವೆ. ಇವುಗಳನ್ನು ಒಂದನೇ ಸೋಮೇಶ್ವರ ಮತ್ತು ಅವನ ಪತ್ನಿಯೆಂದೂ ಹೇಳಲಾಗುತ್ತದೆ.
ಕುರುವತ್ತಿಯಿಂದ ಹೂವಿನ ಹಡಗಲಿಗೆ ೩೯ ಕಿ.ಮೀ ಇರುತ್ತದೆ.
ಹತ್ತಿರವಿರುವ ಪ್ರವಾಸಿ ತಾಣಗಳು
• ಮೈಲಾರದ ಮೈಲಾರಲಿಂಗೇಶ್ವರದೇವಾಲಯ, ಹೂವಿನಹಡಗಲಿ ತಾಲ್ಲೂಕು.
• ಹಂಪಿ &ತುಂಗಾಭದ್ರಾ ಜಲಾಶಯಗಳು, ಹೊಸಪೇಟೆತಾಲ್ಲೂಕು
• ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಮತ್ತು ಉಚ್ಚಂಗಿ ದುರ್ಗಾದೇವಾಲಯ

ಫೋಟೋ ಗ್ಯಾಲರಿ

  • ಮಲ್ಲಿಕಾರ್ಜುನ ದೇವಸ್ಥಾನ, ಕುರುವತ್ತಿ, ಹೂವಿನ ಹಡಗಲಿ ತಾಲೂಕು
  • ಮಲ್ಲಿಕಾರ್ಜುನ ದೇವಸ್ಥಾನ, ಕುರುವತ್ತಿ, ಹೂವಿನ ಹಡಗಲಿ ತಾಲೂಕು
  • ಮಲ್ಲಿಕಾರ್ಜುನ ದೇವಸ್ಥಾನ, ಕುರುವತ್ತಿ, ಹೂವಿನ ಹಡಗಲಿ ತಾಲೂಕು

ತಲುಪುವ ಬಗೆ:

ವಿಮಾನದಲ್ಲಿ

ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ

ರೈಲಿನಿಂದ

ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ

ರಸ್ತೆ ಮೂಲಕ

ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.