Close

ಮೈಲಾರಲಿಂಗೇಶ್ವರ ದೇವಸ್ಥಾನ-ಮೈಲಾರ, ಹೂವಿನ ಹಡಗಲಿ

ವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಮೈಲಾರವು ವಿಜಯನಗರಜಿಲ್ಲೆಯ ಪ್ರಸಿದ್ಧ ಧಾರ್ಮಿಕಕ್ಷೇತ್ರವಾಗಿದೆ. ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಈ ಗ್ರಾಮವು ಮೈಲಾರಲಿಂಗೇಶ್ವರದೇವಾಲಯ, ಜಾತ್ರೆ ಮತ್ತು ಕಾರ್ಣೀಕಗಳಿಂದ ವಿಶೇಷವಾಗಿ ಪ್ರಸಿದ್ಧಿ ಹೊಂದಿದೆ. ಈ ಗ್ರಾಮವನ್ನು ಶಾಸನಗಳಲ್ಲಿ ಉಂಗ್ಲಾರಎAದೇಕರೆಯಲಾಗಿದೆ. ಇದಕ್ಕೆತುಂಗಭದ್ರಾ ನದಿಯುಉಂಗುರಾಕಾರದಲ್ಲಿ ಬಳಸಿ ಹರಿಯುತ್ತಿರುವುದೂಕಾರಣ.ಇಲ್ಲಿನ ಮೈಲಾರದೇವರಆರಾಧನಾ ಪರಂಪರೆಅತ್ಯAತಪ್ರಾಚೀನವಾದದ್ದಾಗಿದೆ. ಆದರೆ ವಾಸ್ತು, ಮೂರ್ತಿಶಿಲ್ಪ ಮತ್ತು ಶಾಸನಗಳ ಹಿನ್ನೆಲೆಯಲ್ಲಿಕಲ್ಯಾಣಚಾಲುಕ್ಯ ಹಾಗೂ ವಿಜಯನಗರಕಾಲದಲ್ಲಿ ಹೆಚ್ಚು ಪ್ರಚಲಿತವಾಗಿದೆ.
ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮೈಲಾರ ಲಿಂಗೇಶ್ವರದೇವಾಲಯವುಗರ್ಭಗೃಹ, ಅಂತರಾಳ, ಸಭಾಮಂಟಪ, ತೆರೆದಮಂಟಪ, ಉಪದೇಗುಲಗಳು ಹಾಗೂ ಮಹಾದ್ವಾರಗೋಪುರಗಳಿಂದ ವಿಶಾಲವಾಗಿದೆ.ಗರ್ಭಗೃಹದಲ್ಲಿ ಮಣ್ಣಿನಿಂದ ತಯಾರಿಸಿದ ಸುಮಾರು ನಾಲ್ಕು ಅಡಿಗಳಷ್ಟು ಎತ್ತರದಮೈಲಾರ ಮೂರ್ತಿ ಹಾಗೂ ಅದರ ಮುಂದೆಸ್ವಯAಭೂ ಶಿವಲಿಂಗವಿದೆ.
ಮೈಲಾರದೇವರುತನ್ನ ನಾಲ್ಕು ಕೈಗಳಲ್ಲಿ ಮೇಲಿನವು ತ್ರಿಶೂಲ ಮತ್ತು ಡಮರುಗಳನ್ನು ಹಿಡಿದಿದ್ದರೆ, ಕೆಳಗಿನ ಕೈಗಳಲ್ಲಿ ಖಡ್ಗ ಮತ್ತು ಭಿಕ್ಷಾಪಾತ್ರೆಗಳನ್ನು ಹಿಡಿದಿದ್ದಾನೆ. ಮುಖದಲ್ಲಿದಪ್ಪದಾದ ಮೀಸೆ, ಇಳಿಬಿದ್ದ ಗಡ್ಡ ಹಾಗೂ ತಲೆಯಲ್ಲಿ ಸುತ್ತಿದಜಡೆಯನ್ನು ಹೊಂದಿರುವನು. ಮೈಲಾರನ ಮೇಲ್ಭಾಗದಲ್ಲಿಕೀರ್ತಿಮುಖದ ಪ್ರಭಾವಳಿ, ಕೆಳಗೆ ಇಕ್ಕೆಲಗಳಲ್ಲಿ ಛಾಮರಧಾರೆಯರು ನಿಂತಿರುವರು. ಮೈಲಾರನ ಮಣ್ಣಿನ ಮೂರ್ತಿಯ ಹಿನ್ನೆಲೆಯಲ್ಲಿ ಈ ಸ್ಥಳವನ್ನು ಮಣ್ಣು ಮೈಲಾರವೆಂದೂ, ಹಾಗೆಯೇ ಈ ದೈವವು ಪ್ರಾಚೀನವಾದುದರಿಂದ ಹಿರೇ ಮೈಲಾರವೆಂದೂಕರೆಯಲಾಗುತ್ತದೆ.
ಮೈಲಾರ ಲಿಂಗಪ್ಪನ ಕೆಳಗೆ ಎರಡು ರುಂಡಗಳಿದ್ದು ಅವುಗಳನ್ನು ಮಲ್ಲಾಸುರ ಮತ್ತು ಮಣಿಕಾಸುರರೆಂದುಕರೆಯುತ್ತಾರೆ. ದೇವಾಲಯದ ಸಭಾಮಂಟಪದಲ್ಲಿತಿರುಗಣೆಯAತ್ರದಿAದ ಮಾಡಿದ ಹೊಳಪುಳ್ಳ ಕಲ್ಯಾಣಚಾಲುಕ್ಯ ಶೈಲಿಯ ಕಂಬಗಳಿವೆ. ಇದರಿಂದಕಲ್ಯಾಣಚಾಲುಕ್ಯಕಾಲದ ಹೊತ್ತಿಗೆ ಈ ದೇವಾಲಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಸಭಾಮಂಟಪದ ಬಾಗಿಲುವಾಡವುಅರೆಗಂಬ, ಹೂಬಳ್ಳಿ ಮೊದಲಾದ ಶಾಖೆಗಳಿಂದ ಅಲಂಕೃತವಾಗಿದ್ದು, ಲಲಾಟದಲ್ಲಿಗಜಲಕ್ಷಿö್ಮಯನ್ನುಕಡೆದಿರುರು. ಸಭಾಮಂಟಪದಲ್ಲಿ ವಿಜಯನಗರ ಶೈಲಿಯ ನಾಲ್ಕು ಕಂಬಗಳಿವೆ. ಗರ್ಭಗೃಹದ ಮೇಲೆ ದ್ರಾವಿಡ ಮಾದರಿಯತ್ರಿತಲ ಶಿಖರವಿದೆ. ಮೈಲಾರದೇವಾಲಯಕ್ಕೆ ಹೊಂದಿಕೊAಡAತೆ ಗಂಗಮಾಳಮ್ಮ ದೇವಾಲಯವೂಇದೇಆವರಣದಲ್ಲಿದೆ. ಈ ದೇಗುಲದ ಸುಖನಾಸಿ ಮತ್ತು ನವರಂಗ ಮಂಟಪವನ್ನುಕ್ರಿ.ಶ. ೧೪೧೨ರಲ್ಲಿ ಗಂಗರಸ ಎಂಬುವವನು ನಿರ್ಮಿಸಿದ್ದನು. ದೇವಾಲಯದಆವರಣದಲ್ಲಿ ವಿಷ್ಣು ಕಾಂಚಾವೀರರ ಶಿಲ್ಪಗಳು, ಕಾಳಮ್ಮ, ವೀರಭದ್ರ, ಜುಂಜಪ್ಪ ಮೊದಲಾದ ಶಿಲ್ಪಗಳುಳ್ಳ ಚಿಕ್ಕದಾದ ದೇಗುಲಗಳಿವೆ. ಈ ಗ್ರಾಮದಲ್ಲಿ ಅನೇಕ ಶಿಲಶಾಸನಗಳಿವೆ.
ಮೈಲಾರ ಲಿಂಗಪ್ಪದೇವಾಲಯದ ಕಂಬವೊAದರ ಮೇಲೆ ವಿಜಯನಗರಅರಸರಾದಒಂದನೇ ಮತ್ತುಎರಡನೇದೇವರಾಯರ ಶಿಲಾಶಾಸನಗಳಿದ್ದು(೧೪೧೨, ೧೪೪೬) ಇವು ಮಯ್ಲಾರದೇವರ ಭಂಡಾರದಅಧಿಕಾರಿಯಾಗಿದ್ದಗAಗರಸುದೇವಾಲಯದರAಗಮAಟಪ, ಚಿತ್ರತೋರಣ, ನಾಲ್ಕು ಕಂಬಗಳಿAದ ಕೂಡಿದರಂಗಮAಟಪ, ಹೆಗ್ಗಡೆದೇವರ ಶಿಲಾಮಂಟಪ, ಮಾಳಲದೇವಿಯ ಸುಕನಾಸಿ ಮತ್ತು ನವರಂಗಮAಟಪಗಳನ್ನು ನಿರ್ಮಿಸಿದ್ದರೆಂದು ತಿಳಿಸುತ್ತವೆ.ಹಾಗೆಯೇಕ್ರಿ.ಶ. ೧೫೧೮ರಲ್ಲಿ ಹೊನ್ನಿಸೆಟ್ಟಿಯ ಮಗ ನಕರಸಯ್ಯ ಮತ್ತು ಅವನ ಹೆಂಡತಿ ಬಸಮ್ಮಮೈಲಾರದೇವರಉತಸವ ಮೂರ್ತಿಗಳನ್ನು ಮಾಡಿಸಿಕೊಟ್ಟರಂದೂ, ಕ್ರಿ.ಶ. ೧೫೪೭ರಲ್ಲಿ ಮುಡಗಂದಲ ತಯರಸನಾಯಕನ ಮಗನಾದ ಭೆಂನಾಯಕನು ಮಯಿಲಾರದ ಕಪಿಲಮುನಿ ಹೆಗ್ಗಪ ಶಿವಾಚಾರ್ಯ ವಡೆಯನ ಮಗ ವರುಣಕಾಂತ ವಡೆಯನಿಗೆಅಮರಗೆರೆಯನ್ನುದಾನವಾಗಿ ನೀಡಿದುದಾಗಿಇಲ್ಲಿನ ಶಾಸನಗಳು ಮಾಹಿತಿ ನೀಡುತ್ತವೆ.
ಮೈಲಾರವು ಪ್ರತಿವರ್ಷವೂ ನಡೆಯವಅಲ್ಲಿನಜಾತ್ರೆ ಮತ್ತುಕಾರ್ಣೀಕೋತ್ಸವದಿಂದ ಹೆಸರಾಗಿದೆ. ಈ ಜಾತ್ರೆಯಲ್ಲಿ ಹಾಲು ಉಕ್ಕಿಸುವುದು, ಮೌನ ಸವಾರಿ, ಗೊರವರದೋಣಿಸೇವೆ, ಕಂಚಾವೀರರ ಪವಾಡಗಳಾದ ಸರಪಣಿ ಹರಿಯುವ, ಬಗಣಿಗೂಟ ಸಂಪ್ರದಾಯ, ಭಂಡಾರ ಪೂಜೆ, ಕಡುಬಿನ ಕಾಳಗ, ಅಂಬಲಿ ಪ್ರಸಾದ ಮತ್ತು ಕಾರ್ಣೀಕೋತ್ಸವಗಳು ಪ್ರಮುಖ ಆಚರಣೆಗಳಾಗಿವೆ. ಈ ಜಾತ್ರೆಯ ವಿಶೇಷತೆಯೆಂದರೆ ಮೈಲಾರ ಲಿಂಗೇಪ್ಪನಕಾರ್ಣೀಕೋತ್ಸವ. ಇದು ಸಾಮಾನ್ಯವಾಗಿ ಮಾಘ ಮಾಸದ ಭಾರತ ಹುಣ್ಣಿಮೆಯದಿನಗಳಂದು ನಡೆಯುತ್ತದೆ. ಇದು ಈ ಭಾಗದಜನರುಅದರಲ್ಲೂರೈತಾಪಿ ಮತ್ತಿತರರಿಗೆಆ ವರ್ಷದಮಳೆಬೆಳೆಯ ಭವಿಷ್ಯವನ್ನು ತಿಳಿಸುವ ಭವಿಷ್ಯವಾಣಿಯೇಆಗಿದೆ.

ಮೈಲಾರದಿಂದ ಹೂವಿನಹಡಗಲಿ ತಾಲ್ಲೂಕಿಗೆೆ೩೮ ಕಿ.ಮೀ ಇರುತ್ತದೆ.

ಹತ್ತಿರವಿರುವ ಪ್ರವಾಸಿ ತಾಣಗಳು
• ಕುರುವತ್ತಿಯ ಮಲ್ಲಿಕಾರ್ಜುನದೇವಾಲಯ, ಹೂವಿನಹಡಗಲಿ ತಾಲ್ಲೂಕು.
• ಹಂಪಿ &ತುಂಗಾಭದ್ರಾ ಜಲಾಶಯಗಳು, ಹೊಸಪೇಟೆತಾಲ್ಲೂಕು
• ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಮತ್ತು ಉಚ್ಚಂಗಿ ದುರ್ಗಾದೇವಾಲಯ

ಫೋಟೋ ಗ್ಯಾಲರಿ

  • ಮೈಲಾರಲಿಂಗೇಶ್ವರ ದೇವಸ್ಥಾನ-ಮೈಲಾರ, ಹೂವಿನ ಹಡಗಲಿ
  • ಮೈಲಾರಲಿಂಗೇಶ್ವರ ದೇವಸ್ಥಾನ-ಮೈಲಾರ, ಹೂವಿನ ಹಡಗಲಿ
  • ಮೈಲಾರಲಿಂಗೇಶ್ವರ ದೇವಸ್ಥಾನ-ಮೈಲಾರ, ಹೂವಿನ ಹಡಗಲಿ

ತಲುಪುವ ಬಗೆ:

ವಿಮಾನದಲ್ಲಿ

ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ

ರೈಲಿನಿಂದ

ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ

ರಸ್ತೆ ಮೂಲಕ

ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.