Close

ಸಾಮಾಜಿಕ ಭದ್ರತೆ ಮತ್ತು ಪಿಂಚಣಿ

ಕರ್ನಾಟಕ ಸರ್ಕಾರವು ಅಸಹಾಯಕ, ಅಶಕ್ತ ವ್ಯಕ್ತಿಗಳಿಗಾಗಿ ಹಾಗೂ ನಿರ್ಗತಿಕ ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಅನೇಕ ಸಾಮಾಜಿಕ ಭದ್ರತೆ ಯೋಜನೆಗಳನ್ನು ತಹಶೀಲ್ದಾರರು ತಾಲ್ಲೂಕು ಮಟ್ಟದಲ್ಲಿ ಕಾರ್ಯಗತಗೊಳಿಸುತ್ತಿದ್ದಾರೆ. ಸದರಿ ಯೋಜನೆಯನ್ನು ಉತ್ತಮ ರೀತಿಯಲ್ಲಿ ಜಾರಿಗೆ ತರಲು ಸಾಮಾಜಿಕ ನಿರ್ದೇಶನಾಲಯವು ಸರ್ಕಾರಿ ಆದೇಶ ಸಂಖ್ಯೆ:ಕಂ.ಇ.44 ಎಂಎಸ್ ಟಿ 2007, ದಿನಾಂಕ:-08-05-2007ರಂತೆ ಅಸ್ತಿತ್ವಕ್ಕೆ ಬಂದಿದೆ. ನಿರ್ದೇಶನಾಲಯದ ಮುಖ್ಯ ಉದ್ದೇಶ ಸಾಮಾಜಿಕ ಭದ್ತತೆಗಳಿಗೆ ಸಂಬಂಧ ಪಟ್ಟ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಾಲಕಾಲಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದಾಗಿರುತ್ತದೆ.
 

ಕೆಳಕಂಡ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯವು ನಿರ್ವಹಿಸುತ್ತದೆ:

  • ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ
  • ವಿಧವಾ ಪಿಂಚಣಿ ಯೋಜನೆ
  • ಅಂಗವಿಕಲ ಪಿಂಚಣಿ
  • ಸಂಧ್ಯಾ ಸುರಕ್ಷಾ ಯೋಜನೆ
  • ಆದರ್ಶ ವಿವಾಹ ಯೋಜನೆ
  • ರಾಷ್ಟ್ರೀಯ ಕುಟುಂಬ ನೆರವು ಯೋಜನೆ
  • ಅಂತ್ಯ ಸಂಸ್ಕಾರ ಸಹಾಯ ಧನ ಯೋಜನೆ
  • ಆಮ್ ಆದ್ಮಿ ಬಿಮಾ(ಜನಶ್ರೀ) ಯೋಜನೆ
  • ಮನಸ್ವಿನಿ
  • ಮೈತ್ರಿ

ಭೇಟಿ: https://dssp.karnataka.gov.in/dssp/

ಜಿಲ್ಲಾಧಿಕಾರಿಗಳ ಕಚೇರಿ

ಐ ಬಿ ಅಮರಾವತಿ ಹೊಸಪೇಟೆ ವಿಜಯನಗರ ಜಿಲ್ಲೆ
ನಗರ : ವಿಜಯನಗರ